ಬೀದಿನಾಯಿಗಳಿಗೆ ಆಹಾರ ನೀಡಿದ ಯುವತಿಗೆ ಕಪಾಳ ಮೋಕ್ಷ ಮಾಡಿದ ವ್ಯಕ್ತಿ!

ಭಾಸ್ಕರ ಪತ್ರಿಕೆ
0

ಗಾಜಿಯಾಬಾದ್: ಜನವಸತಿ ಸಮುಚ್ಚಯದ ಬಳಿ ಯುವತಿಯೊಬ್ಬಳು ಬೀದಿನಾಯಿಗಳಿಗೆ ಆಹಾರ ನೀಡುತ್ತಿದ್ದಾಗ ಆಕೆಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

ಗಾಜಿಯಾಬಾದ್ ನ ವಿಜಯನಗರದಲ್ಲಿರುವ ಬ್ರಹ್ಮಪುತ್ರ ಎನ್ಕ್ಲೇವ್ ಸೊಸೈಟಿ ಅಪಾರ್ಟ್ ಮೆಂಟ್ ಬಳಿ ಸ್ಥಳೀಯ ನಿವಾಸಿ ಯಶಿಕಾ ಶುಕ್ಲಾ ಎಂಬ ಯುವತಿ ಬೀದಿನಾಯಿಗಳಿಗೆ ಆಹಾರ ನೀಡುತ್ತಿದ್ದರು. ಈ ವೇಳೆ ಇದನ್ನು ಗಮನಿಸಿದ ಕಮಲ್ ಖನ್ನಾ ಯುವತಿ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಆಕೆಯ ಕಪಾಳಕ್ಕೆ ಥಳಿಸಿದ್ದಾರೆ.

ಈ ವೇಳೆ ಗೊಂದಲಕ್ಕೀಡಾದ ಯುವತಿ ಏಕೆ ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ನೀವು ನಾಯಿಗಳಿಗೆ ಆಹಾರ ನೀಡುವುದರಿಂದಲೇ ಅವರು ಇಲ್ಲಿ ಆಹಾರ ಸಿಗುತ್ತವೆ ಎಂದು ಇಲ್ಲಿದೆ ಬರುತ್ತವೆ. ಇಲ್ಲಿ ಎಲ್ಲರನ್ನೂ ಕಚ್ಚುತಿವೆ ಎಂದು ಮತ್ತೆ ಆಕೆಯ ಕಪಾಳಕ್ಕೆ ಥಳಿಸಿದ್ದಾರೆ.

ಕಮಲ್ ಖನ್ನಾ ಕೇವಲ 38 ಸೆಕೆಂಡ್ ನಲ್ಲಿ ಬರೊಬ್ಬರಿ 8 ಬಾರಿ ಯುವತಿ ಕಪಾಳಕ್ಕೆ ಬಾರಿಸಿದ್ದಾರೆ. ಈ ವೇಳೆ ಯುವತಿ ತನ್ನೊಂದಿಗೆ ಇದ್ದವರಿಗೆ ಮೊಬೈಲ್ ನಲ್ಲಿ ವಿಡಿಯೋ ಮಾಡುವಂತೆ ಹೇಳಿದ್ದು ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಈ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಲೇ ಹಲ್ಲೆ ಮಾಡಿದ ಕಮಲ್ ಖನ್ನಾ ವಿರುದ್ಧ ಯುವತಿ ಯಶಿಕಾ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಮಲ್ ಖನ್ನಾ ರನ್ನು ವಶಕ್ಕೆ ಪಡೆದಿದ್ದು, ಈ ವೇಳೆ ಕಮಲ್ ಖನ್ನಾ ಕೂಡ ಯುವತಿ ಯಶಿಕಾ ತನ್ನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಪ್ರತಿ ದೂರು ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*