ಬೆಂಗಳೂರು: ಕಾಮಾಕ್ಷಿಪಾಳ್ಯದಲ್ಲಿ ವಾಸವಿರುವ ಆ ಕುಟುಂಬ ಈ ದಿನ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿಯಲ್ಲಿದೆ, ಆ ಕುಟುಂಬದವರ ಕಷ್ಟ ನೋಡುವವರಿಗೆ ನಿಜಕ್ಕೂ ಕಣ್ಣೀರು ಬರುವಂತಹ ಸಂಗತಿ ಅಂದರೆ ತಪ್ಪಾಗದು, ನಾವು ಚೆನ್ನಾಗಿದ್ದಾಗ ಏನು ಬೇಕಾದರೂ ಮಾಡಬಹುದು ಆದರೆ ಎಲ್ಲವನ್ನು ಕಳೆದುಕೊಂಡಾಗ ನಮಗೆ ಏನೂ ಇಲ್ಲ ಹಲೋ ಆರೋಗ್ಯ ಆಯ್ತು ಆಗ ಯಾರು ಇರಲ್ಲ ಇಂತಹ ಪರಿಸ್ಥಿತಿ ಎದುರಿಸುತ್ತಿರುವವರು ಮಹಾದೇವ, ಭವ್ಯ ಮತ್ತು ಮಿಥುನ್ ಎಂಬ ನಿವಾಸಿಗರು, ಇವರು ಮನೆ ಬಾಡಿಗೆ ಕಟ್ಟುವುದಕ್ಕೂ ಆಗದೆ ಸಣ್ಣದಾದ 5/6 ಅಡಿ ಉದ್ದದ ಒಂದು ರೂಮಿನಲ್ಲಿ ಮೂರು ಜನ ಜೀವಿಸುತ್ತಿದ್ದು, ಇಂದು ಅವರಿಗೆ ನೆರವು ಬೇಕಾಗಿದೆ ಆ ಮನೆಯ ಯಜಮಾನ ಮಹದೇವ ಅವರು ಚಾಲಕ ವೃತ್ತಿಯನ್ನು ಅವಲಂಬಿಸಿದ್ದು, ವೃತ್ತಿಯಲ್ಲಿ ಇರುವಾಗಲೇ ಇದ್ದಕ್ಕಿದ್ದ ಹಾಗೆ ಕಾಲು ನೋವು ಶುರುವಾಗಿ ಆ ಸಮಯದಲ್ಲಿ ಇವರ ಸಂಬಂಧಿಕರು ಪತ್ನಿ ಒಡಗೂಡಿ ಆಸ್ಪತ್ರೆಗೆ ದಾಖಲಿಸಿ, ಪರೀಕ್ಷೆಗೆ ಒಳಪಡಿಸಿದಾಗ ವೈದ್ಯರು ವೆರಿಕೋಸ್ ಮೀನ್ಸ್ ಎಂದು ಹೇಳಿದರು ಅದರಂತೆ ಚಿಕಿತ್ಸೆ ಪಡೆಯುತ್ತಿದ್ದು ಇವರಿಗೆ ಇರುವ ಈ ಕಾಯಿಲೆ ಮತ್ತಷ್ಟು ಇವರು ಎಷ್ಟು ಖರ್ಚು ಮಾಡಿದರೂ ಸಾಕಷ್ಟು ವೆಚ್ಚವಾಗತೊಡಗಿತು, ಇವರಿಗೆ ಹಣದ ಸಹಾಯವನ್ನು ಬಂದು ಬಳಗದವರು ಮಾಡಿರುತ್ತಾರೆ ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಒಪ್ಪೊತ್ತಿಗೆ ಊಟ ಮಾಡುವುದು ಹೇಗೆ ಎಂಬ ಯೋಚನೆ ಆಗುವುದು, ಒಂದು ರೀತಿ ಆದರೆ ಮಹದೇವ ಅವರ ಪತ್ನಿ ಭವ್ಯ ಅವರು ಇಷ್ಟು ವರ್ಷ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡು ಕುಟುಂಬದ ಜವಾಬ್ದಾರಿಯ ಹೊಣೆ ಹೊತ್ತಿದ್ದರು ಆದರೆ ದುರ್ವಿಧಿ ಅವರ ಬೆನ್ನು ಮೂಳೆಯ ಸಮಸ್ಯೆ ಬಂದು ಅವರು ಸಹ ಏನೋ ಮಾಡುವ ಪರಿಸ್ಥಿತಿಯಲ್ಲಿ ಈಗ ಇಲ್ಲ, ಇವರ ಮಗ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ೧೦ನೇ ತರಗತಿ ಓದುವುದನ್ನು ಅರ್ಧಕ್ಕೆ ನಿಲ್ಲಿಸಿ ತಂದೆ ತಾಯಿ ಪೋಷಣೆಗೆಂದು ಕೂಲಿ ಕೆಲಸ ಮಾಡುತ್ತಿದ್ದಾನೆ, ಇದನ್ನೆಲ್ಲಾ ನೋಡಿದಾಗ ಇಂಥವರಿಗೂ ಕರುಳು ಚುರ್ರ್ ಎನ್ನಿಸುತ್ತದೆ, ದಯವಿಟ್ಟು ಇವರ ಬಂಧುಗಳಲ್ಲಿ ತಾವು ಒಬ್ಬರು ಎಂದು ಭಾವಿಸಿ, ಈ ಕುಟುಂಬಕ್ಕೆ ನಿಮ್ಮ ಕೈಲಾದ ಸಹಾಯ ಮಾಡಿ ಮತ್ತು ಈ ವಿಷಯವನ್ನು ನಿಮ್ಮ ಸ್ನೇಹಿತರಿಗೆ ತಿಳಿಸಿ ಅನುಕೂಲ ಮಾಡಿಕೊಡಿ.
ಇವರ ಫೋನ್ ಪೇ ನಂಬರ್ 8073338362
ನೀವು ಇವರನ್ನು 9880490494, 9740567312 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿಯೂ ಕೂಡ ಸಂಪರ್ಕಿಸಬಹುದು
