ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ವತಿಯಿಂದ ಭಾರತರತ್ನ, ಭಾರತದ ಮಾಜಿ ಪ್ರಧಾನಿಗಳು ಹಿರಿಯ ಸಂಸದೀಯ ಪಟು, ಅಜಾತಶತ್ರು ಎನಿಸಿದ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 7ನೇ ವರ್ಷದ ಪುಣ್ಯಸ್ಮರಣೆ

ಭಾಸ್ಕರ ಪತ್ರಿಕೆ
0

ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ಹಾಗೂ ಅಖಿಲ ಕರ್ನಾಟಕ ಯುಟ್ಯೂಬರ್ಸ ಸಂಘ ತಿಪಟೂರು ಇವರ ವತಿಯಿಂದ ಭಾರತರತ್ನ, ಭಾರತದ ಮಾಜಿ ಪ್ರಧಾನಿಗಳು ಹಿರಿಯ ಸಂಸದೀಯ ಪಟು, ಅಜಾತಶತ್ರು ಎನಿಸಿದ  ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಏಳನೇ ವರ್ಷದ ಪುಣ್ಯಸ್ಮರಣೆಯನ್ನು ಇಂದು ತಿಪಟೂರು ತಾಲೂಕಿನ ಹಾಸನ ವೃತ್ತದಲ್ಲಿರುವ ನಂದಿನಿ ಆವರಣದ ಮಳಿಗೆಯಲ್ಲಿ ಸರಳ ಮತ್ತು ಸಾಂಕೇತಿಕವಾಗಿ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಯೂಟ್ಯೂಬರ್ಸ್  ಸಂಘದ ರಾಜ್ಯಾಧ್ಯಕ್ಷರಾದ ಡಾ! ಭಾಸ್ಕರ್ ಮಾತನಾಡಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಈ ದೇಶದ ಪ್ರಧಾನಿಗಳಾಗಿ ಸಲ್ಲಿಸಿದ ಸೇವೆ ಅಮೋಘವಾದದ್ದು ಹಾಗೂ ಇವರು ಸರಳ ಸಜ್ಜನಿಕೆಯ ಸರದಾರರೆನಿಸಿದ್ದರು ಇಂತಹ ಮುತ್ಸದ್ದಿ ರಾಜಕಾರಣಿ ವಿರಳ ಎಂದು 7ನೇ ವರ್ಷದ ಪುಣ್ಯಸ್ಮರಣೆ ನಮನಗಳನ್ನು ಸಲ್ಲಿಸಿದರು ಹಾಗೂ ತಾಲೂಕ ಸಂಘದ ಅಧ್ಯಕ್ಷರಾದ ಟಿ ರಾಜು ಬೆಣ್ಣೆನಹಳ್ಳಿ ಮಾತನಾಡಿ ಈ ದೇಶ ಕಂಡಂತ ಅಪರೂಪದ ಹಿರಿಯ ಮುತ್ಸದ್ದಿ ರಾಜಕಾರಣಿ ಇಂತಹ ಸರಳಾತೀ ಸರಳ ರಾಜಕಾರಣಿ ವಿರಳ ಎಂದರು ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಯೂಟ್ಯೂಬರ್ ಸಂಘದ ರಾಜ್ಯಾಧ್ಯಕ್ಷರಾದ ಡಾಕ್ಟರ್ ಭಾಸ್ಕರ್ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ಟಿ ರಾಜು ಬೆಣ್ಣೆನಹಳ್ಳಿ  ಕಿರಣ್ ಕುಮಾರ್ ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನ್, ಅಖಿಲೇಶ್ ಗೌತಮ್  ಇನ್ನು ಮುಂತಾದವರು ಸೇರಿ ಈ ಗಣ್ಯರಿಗೆ  ಗೌರವ ನಮನ ಸಲ್ಲಿಸಿದರು.

ವರದಿ: ಟಿ. ರಾಜು ಬೆಣ್ಣೆನಹಳ್ಳಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*