ಕೊಪ್ಪಳ ಆರ್‌ಟಿಓ ಕಚೇರಿಯಲ್ಲಿ ಹಣ ಕೈ ಬಿಚ್ಚಿದರೆ ಮಾತ್ರ ಕೆಲಸ ??

ಭಾಸ್ಕರ ಪತ್ರಿಕೆ
0


ಕೊಪ್ಪಳ:  ಕೊಪ್ಪಳ ಆರ್‌ಟಿಓ ಕಚೇರಿಯಲ್ಲಿ ಹಣ ಕೈ ಬಿಚ್ಚಿದರೆ ಮಾತ್ರ ಕೆಲಸ.‌  ಖಚೇರಿಯಲ್ಲಿ ಏಜೆಂಟ್ ರದೆ ದರ್ಬಾರ್ ಕಚೇರಿಯ ಕೆಲಸವಾಗಬೇಕಾದರೆ ಏಜಂಟರ ಮೂಕ ಹೋದರೆ ಮಾತ್ರ ಕೆಲಸ     ಈ ಎಲ್ಲ ಕೆಲಸ ಮಾಡುವವರು ಇವರೆ. ಎಲ್ಲ ದಾಖಲೆ ರೆಡಿ ಮಾಡಿ, ಆರ್‌ಟಿಒ ಅಧಿಕಾರಿಗಳಿಗೆ ಫೈಲ್‌ಗೆ ಇಂತಿಷ್ಟು ದುಡ್ಡುಕೊಟ್ಟರೆ ಆ ಅಧಿಕಾರಿಗಳು ದಾಖಲೆಗೆ ಸಹಿ ಮಾಡಿಬಿಡುತ್ತಾರೆ.

ಅಧಿಕಾರಿಗಳಿಂದಲೇ ಉಪದೇಶ: ಇದು ಇಲ್ಲಿಯ ಅಲಿಖಿತ ಕಾನೂನು. ಎಂಥ ವಿದ್ಯಾವಂತನಾದರೂ, ಆರ್‌ಟಿಒ ಕಚೇರಿಗೆ ಹೋಗಿ ತಮ್ಮ ವಾಹನದ ರಿನಿವಲ್, ನೂತನ ಲೈಸನ್ಸ್ ಅಥವಾ ನೂತನ ಗಾಡಿಯ ನೋದಣಿ ಬಗ್ಗೆ ಹೋದರೆ, ಸ್ವತಃ ಆರ್‌ಟಿಒ ಅಧಿಕಾರಿಗಳೇ, ನಿಮಗ್ಯಾಕೆ ಬೇಕ್ರೀ ಈ ಎಲ್ಲ ಉಸಾಬರಿ, ಯಾವನಾದರೂ ಏಜೆಂಟ್ ಮೂಲಕ ಮಾಡಿಸಿಕೊಳ್ಳಿ ನಿಮ್ಮ ಸಮಯ ಹಾಳು ಎಂದು ಉಪದೇಶ ನೀಡುತ್ತಾರೆ.
ಸಾರ್ವಜನಿಕರ ಜೇಬಿಗೆ ಕತ್ತರಿ: ಕಾರಣ ಸಾವಿರ ರೂಪಾಯಿ ವೆಚ್ಚದಲ್ಲಿ ಸಿಗಬೇಕಾದ ದಾಖಲಾತಿ ಒಂದು ವೇಳೆ ವಿದ್ಯಾವಂತರು ಏಜೆಂಟರ್ ಮೂಲಕ ಕೆಲಸ ಮಾಡಿಕೊಂಡರೆ, ನಿಮ್ಮ ಜೇಬಿಗೆ ಕತ್ತರಿ ಗ್ಯಾರಂಟಿ, ನಿಮ್ಮ ಒಂದು ಸಾವಿರ ರೂಪಾಯಿಯ ವೆಚ್ಚ ಏಜೆಂಟರ ಮೂಲಕ ಹೋದರೆ ಅದು ಐದು ಸಾವಿರವಾಗುತ್ತದೆ.
ಈ ಕಚೇರಿಯಲ್ಲಿ ……….. ಎಂಬ ಖತರ್ನಾಕ್ ಏಜೆಂಟ ಇದ್ದಾನೆ. ಇಲ್ಲಿ ಇವನದ್ದೇ ಪಾರುಪತ್ಯ. ಇವನಿಗಿಂತಲೂ ದೊಡ್ಡಕುಳಗಳಿವೆ.

ಅವು ದೊಡ್ಡ ದೊಡ್ಡ ವಾಹನಗಳ ನೋದಣಿ, ಅವುಗಳ ಅಕ್ರಮ ಸಕ್ರಮಗಳ ಬಗ್ಗೆ ಲಕ್ಷ ರೂಪಾಯಿ ಲೆಕ್ಕದಲ್ಲಿ ಏಜೆಂಟ್‌ಗಿರಿ ಮಾಡುತ್ತಾರೆ.
ಏಜೆಂಟ್ ಕುಳಗಳದ್ದೇ ಇಲ್ಲಿ ಆಟ: ಈ ಶ್ರೀಶೈಲ್ ಎಂಬ ಕುಳ ಬೆಳಗ್ಗೆ ಆರ್‌ಟಿಒ ಕಚೇರಿಗೆ ಹಾಜರಿ ಹಾಕಿದರೆ, ಸಂಜೆಯವರೆಗೂ ಕೆಲಸ ಮಾಡುತ್ತಾನೆ. ಮನೆಗೆ ಹೋಗುವಾಗ ಜೇಬಿನ ತುಂಬ ದುಡ್ಡು. ನೇರವಾಗಿ ನೂತನ ಲೈಸನ್ಸ್ ಪಡೆಯಲು ಹೋದರೆ, ಅಲ್ಲಿರುವ ಅಧಿಕಾರಿ ಸಿಗ್ನಲ್ ಚಾರ್ಟ್ ತೋರಿಸಿ, ಹಲವರು ಪ್ರಶ್ನೆ ಕೇಳುತ್ತಾನೆ. ಎಲ್ಲ ಸರಿಯಾಗಿ ಹೇಳಿದರೂ, ಇನ್ನೂ ಮೂರು ತಿಂಗಳು ನಿಮಗೆ ಡ್ರೈವಿಂಗ್ ಪಡೆಯುವ ಅರ್ಹತೆ ಇಲ್ಲ ಎಂದು ಮುಖಕ್ಕೆ ಬಿದಂತೆ ಹೇಳುತ್ತಾನೆ.
ಹಣ ಕೊಟ್ಟರೆ ಟೆಸ್ಟ್ ಇಲ್ಲ: ಆದರೆ, ಅದೇ ನೀವು ೩ರಿಂದ ೫ ಸಾವಿರ ರೂಪಾಯಿ ಕೊಟ್ಟು ಏಜೆಂಟರ್ ಮೂಲಕ ಹೋದರೆ, ನಿಮಗ್ಯಾವ ಟೆಸ್ಟ್ ಇರುವುದಿಲ್ಲ. ಬೆಳಗ್ಗೆ ಹಣವನ್ನ ಏಜೆಂಟರ ಮೂಲಕ ಸಂದಾಯಿಸಿದರೆ, ಸರಿಯಾಗಿ ೪ ಗಂಟೆಗೆ ನಿಮಗೆ ಡ್ರೈವಿಂಗ್ ಲೈಸೆನ್ಸ್ ಸಿಗುತ್ತದೆ.
ನಿಮ್ಮ ಅಪ್ಲಿಕೇಷನ್ ಹೊರಬರುವುದಿಲ್ಲ: ಈ ಆರ್‌ಟಿಒ ಕಚೇರಿಯಲ್ಲಿ ಬೆಳಗ್ಗೆ ನಿಮ್ಮ ಅಪ್ಲಿಕೇಷನ್ ಕೊಟ್ಟರೂ ಸಂಜೆಯಾದರೂ ನಿಮ್ಮ ಫೈಲ್ ಮೂವ್ ಆಗುವುದಿಲ್ಲ. ಏಜೆಂಟರು ಅಧಿಕಾರಿಗಳ ಮುಂದಿರುವ ತಮಗೆ ಸಂಬಂಧವಿಲ್ಲದ ಅಪ್ಲಿಕೇಶನ್‌ಗಳನ್ನ ಕೆಳಗೆ ಸರಿಸಿ ತಮಗೆ ಹಣಕೊಟ್ಟ ಗಿರಾಕಿಗಳ ಅಪ್ಲಿಕೇಶನ್ ಮೇಲಿಡುತ್ತಿರುತ್ತಾರೆ.
ಒಂದೊಂದು ಟೇಬಲ್‌ಗೂ ಇಂತಿಷ್ಟು ಹಣ: ಇಲ್ಲಿ ಪ್ಯೂವನ್‌ನಿಂದ ಹಿಡಿದು ಆಫೀಸ್ ಸುಪರಿಟೆಡೆಂಡ್ ವರೆಗೆ ಒಂದು ಟೇಬಲ್‌ಗೆ ಇಂತಿಷ್ಟು ಹಣ ಎಂದು ನಿಗದಿಯಾಗಿರುತ್ತದೆ. ಆ ಹಣ ಅರಿಯಾಗಿ ಆ ಟೇಬಲ್‌ಗೆ ಬಂದರೆ ನಿಮ್ಮ ಕೆಲಸ ಸಲೀಸಾಗಿ ಆಗಿಬಿಡುತ್ತದೆ.


ಈ ಸ್ವರ್ಗದಲ್ಲಿ ದಿನಕ್ಕೆ ಲಕ್ಷಗಟ್ಟಲೇ ಹಣದ ವ್ಯವಹಾರ ನಡೆಯುತ್ತೆ. ಆದರೆ, ಅದು ಕಾನೂನು ಬದ್ಧವಾದ ಹಣ ಅಲ್ಲ. ಬದಲಾಗಿ ಏಜೆಂಟರ್ ಮೂಲಕ ಬರುವ ಹಣ. ಇದರಲ್ಲಿ ಸರ್ಕಾರದ ಬೊಕ್ಕಸಕ್ಕೆ ಹೋಗುವುದೆಷ್ಟೋ, ಅಧಿಕಾರಿಗಳು ಮತ್ತು ಏಜೆಂಟರ್ ಜೇಬಿಗೆ ಬೀಳುವುದೆಷ್ಟೋ  ?



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*