ಜಗಜೀವನರಾಂ ಭವನ:  ವಿಶೇಷ ಅನುದಾನ ಮಂಜೂರಿಗೆ ಸಚಿವ ಮಹಾದೇವಪ್ಪ ಭರವಸೆ: AICC ಸಂಯೋಜಕ ಘೋಡೆ

ಭಾಸ್ಕರ ಪತ್ರಿಕೆ
0

ಬೀದರ್: ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ವಿಶೇಷ ಅನುದಾನ ಮಂಜೂರು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಸಿ ಮಹಾದೇವಪ್ಪ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಸಚಿವರನ್ನು ಭೇಟಿ ಮಾಡಿದ ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಸಂಯೋಜಕ ಜಾನಸನ್ ಘೋಡೆ ಅವರ ಮನವಿಗೆ ಸ್ಪಂದಿಸಿ ಅವರು ಈ ಆಶ್ವಾಸನೆ ನೀಡಿದರು.

ಚಿಕ್ಕಪೇಟೆಯ ಸರ್ವೇ ಸಂಖ್ಯೆ 61 ರಲ್ಲಿ ಭವನ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಒಂದು ಎಕರೆ ಜಮೀನು ಒದಗಿಸಿದೆ. 12 ವರ್ಷ ಗಳ ಹಿಂದೆ ರೂ.50 ಲಕ್ಷ ಅನುದಾನ ಕೂಡ ಮಂಜೂರು ಮಾಡಿದೆ. ಆದರೆ ಈ ಅನುದಾನದಲ್ಲಿ ಭವನ ನಿರ್ಮಾಣ ಅಸಾಧ್ಯವಾಗಿದೆ ಎಂದು ಜಾನಸನ್ ಘೋಡೆ ಸಚಿವರ ಗಮನ ಸೆಳೆದರು.

ಭವನ ನಿರ್ಮಾಣದಿಂದ ಜಿಲ್ಲಾ ಕೇಂದ್ರದಲ್ಲಿ ವಾಸಿಸುವ ದೀನ ದಲಿತರು ಹಾಗೂ ಬಡವರಿಗೆ ಸಭೆ ಸಮಾರಂಭ ಹಾಗೂ ಇತರ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ. ಹೀಗಾಗಿ ಭವನಕ್ಕೆ ರೂ.5 ಕೋಟಿ ವಿಶೇಷ ಅನುದಾನ ಕಲ್ಪಿಸಬೇಕು ಎಂದು ಮನವಿ ಮಾಡಿದರು.  ನಮ್ಮ ಮನವಿಗೆ ಸ್ಪಂದಿಸಿ ಸಚಿವರು ವಿಶೇಷ ಅನುದಾನ ಮಂಜೂರು ಮಾಡಿವ ಭರವಸೆ ನೀಡಿದ್ದಾರೆ ಎಂದು ಜಾನಸನ್ ಘೋಡೆ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*