ಪತ್ನಿ, ಮಗನ ಎದುರೇ ಅಮೆರಿಕದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯ ಶಿರಚ್ಛೇದನ

ಭಾಸ್ಕರ ಪತ್ರಿಕೆ
0

ಡಲ್ಲಾಸ್: ಅಮೆರಿಕದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರನ್ನು ಪತ್ನಿ ಹಾಗೂ ಮಕ್ಕಳ ಎದುರೇ ಶಿರಚ್ಛೇದನ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿರುವ ಘಟನೆ ಡಲ್ಲಾಸ್ ನಗರದ ಮೋಟೆಲ್‌ ನಡೆದಿದೆ.

ಕರ್ನಾಟಕ ಮೂಲದ ಚಂದ್ರ ನಾಗಮಲ್ಲಯ್ಯ(50) ಅಮೆರಿಕದಲ್ಲಿ ಬರ್ಬರವಾಗಿ ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. 37 ವರ್ಷದ ಯೋರ್ಡಾನಿಸ್ ಕೊಬೋಸ್ ಮಾರ್ಟಿನೆಜ್‌ ಎಂಬಾತ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ.

ಹಾಳಾದ ವಾಷಿಂಗ್ ಮೆಷಿನ್ ಬಳಸದಂತೆ ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇವರ ನಡುವೆ ವಾಗ್ವಾದ ನಡೆದಿತ್ತು. ತನ್ನ ಜೊತೆಗೆ ನಾಗಮಲ್ಲಯ್ಯ ನೇರವಾಗಿ ಮಾತನಾಡಲಿಲ್ಲ, ಆತ ಬೇರೊಬ್ಬನ ಬಳಿಯಲ್ಲಿ ಮಾತನಾಡಿ ಆತನ ಹೇಳಿಕೆಯನ್ನ ಭಾಷಾಂತರಿಸಲು ಹೇಳಿದ್ದಾನೆ ಎಂದು ಕೋಪಗೊಂಡ ಯೋರ್ಡಾನಿಸ್ ಕೊಬೋಸ್ ಮಾರ್ಟಿನೆಜ್‌ ಈ ದುಷ್ಕೃತ್ಯ ನಡೆಸಿದ್ದಾನೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಈ ಘಟನೆಯು ಸಂತ್ರಸ್ತ ವ್ಯಕ್ತಿ ನಾಗಮಲ್ಲಯ್ಯ ಅವರ 18 ವರ್ಷದ ಮಗ ಹಾಗೂ ಅವರ ಪತ್ನಿಯ ಕಣ್ಣೆದುರೇ ನಡೆದಿದೆ. ಅವರು ಆತನನ್ನು ತಡೆಯಲು ಸಾಕಷ್ಟು ಪ್ರಯತ್ನಗಳನ್ನೂ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಾರ್ಟಿನೆಜ್‌ ನಾಗಮಲ್ಲಯ್ಯನವರ ಮೇಲೆ ಮಚ್ಚು ಬೀಸಿ ಶಿರಚ್ಛೇದನ ನಡೆಸಿದ್ದ.

ಕೃತ್ಯದ ನಂತರ ಮಾರ್ಟಿನೆಜ್‌ ಪಾರ್ಕಿಂಗ್ ಸ್ಥಳದಲ್ಲಿ ಬಿದ್ದಿದ್ದ ನಾಗಮಲ್ಲಯ್ಯನವರ ರುಂಡ ಮತ್ತು ರಕ್ತದಲ್ಲಿ ನೊಂದಿದ್ದ ಮಚ್ಚನ್ನು ಎತ್ತಿಕೊಂಡು ಹೋಗಿ ಕಸದ ತೊಟ್ಟಿಗೆ ಎಸೆಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದಾಗಿ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ತಲುಪಿದ ಪೊಲೀಸರು ಮಾರ್ಟಿನೆಜ್‌ ನನ್ನು ಬೆನ್ನಟ್ಟಿ ಹಿಡಿದು ಅರೆಸ್ಟ್ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*