ಸದಭಿರುಚಿ ಸಿನಿಮಾ ಅಗತ್ಯ

ಭಾಸ್ಕರ ಪತ್ರಿಕೆ
0

 

ತಿಪಟೂರು: 'ಸದಭಿರುಚಿ ಚಲನಚಿತ್ರ- ಗಳನ್ನು ವೀಕ್ಷಿಸಲು ಜನರಿಗೆ ಈಗಲೂ ಆಸಕ್ತಿ ಇದೆ. ಆದರೆ, ಇದನ್ನು ಜನರು ನೋಡುವುದಿಲ್ಲ ಎಂದು ತೀರ್ಮಾನಿಸಿ ಸದಭಿರುಚಿಯ ಸಿನಿಮಾಗಳನ್ನು ಪ್ರದರ್ಶಿಸದೇ ಇರುವುದು ತಪ್ಪು' ಎಂದು ಕಲಾಕೃತಿ ಅಧ್ಯಕ್ಷ ಡಾ.ಜಿ.ಎಸ್.ಶ್ರೀಧರ್ ಹೇಳಿದರು.

ನಗರದಲ್ಲಿ ಭಾನುವಾರ ಏರ್ಪಡಿ ಸಲಾಗಿದ್ದ ಬರಗೂರು ರಾಮಚಂದ್ರಪ್ಪ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಸ್ವಪ್ನ ಮಂಟಪ' ಚಲನಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಬರಗೂರು ರಾಮಚಂದ್ರಪ್ಪ ಅಧರಿತ ಕಾದಂಬರಿ ಹಲವಾರು  ಉತ್ತಮ ಚಲನಚಿತ್ರ ನಿರ್ದೇಶಿಸಿದ್ದಾರೆ ಎಂದು ನಗರಸಭಾ ಅಧ್ಯಕ್ಷೆ ಯಮುನಾ ಧರಣೇಶ್ ಹೇಳಿದರು. 

ಚಲನಚಿತ್ರ ಪ್ರದರ್ಶನಕ್ಕೆ ಅನೇಕ ಕನ್ನಡಪರ ಸಂಘ-ಸಂಸ್ಥೆಗಳು ಜೊತೆಗೂಡಿ ಕೆಲಸ ಮಾಡಿದ್ದೇವೆ' ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಂ.ಬಸವರಾಜಪ್ಪ ಹೇಳಿದರು.

ಕಸಾಪ ಗೌರವಾಧ್ಯಕ್ಷ ಎಂ.ಡಿ.ಶಿವಕುಮಾರ್, ಕಾರ್ಯದರ್ಶಿ ಮಂಜಪ್ಪ, ನಗರಸಭೆ ಉಪಾಧ್ಯಕ್ಷೆ ಮೇಘಶ್ರೀ, ಸದಸ್ಯ ಸಂಗಮೇಶ್‌, ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಭಾಸ್ಕರ್‌, ವಕೀಲೆ ಶೋಭಾ ಜಯದೇವ್‌, ತಿಪಟೂರು ಕೃಷ್ಣ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*