ಮೈಸೂರು ದಸರಾ ಫಿಲಂ ಫೆಸ್ಟಿವಲ್‌ನಲ್ಲಿ “ಅಡವಿ”ಗೆ ಪ್ರಮಾಣ ಪ್ರಶಸ್ತಿ

ಭಾಸ್ಕರ ಪತ್ರಿಕೆ
0

ಮೈಸೂರು: ಸಂವಿಧಾನ ಸಿನಿ ಕಂಬೈನ್ಸ್ ನಿರ್ಮಾಣದ, ಟೈಗರ್ ನಾಗ್ ನಿರ್ದೇಶನದ “ಅಡವಿ” ಚಲನಚಿತ್ರವು ಮೈಸೂರು ದಸರಾ ಫಿಲಂ ಫೆಸ್ಟಿವಲ್‌ನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದೆ. ಹೌಸ್‌ಫುಲ್ ಪ್ರದರ್ಶನ ಕಂಡ ಈ ಚಿತ್ರಕ್ಕೆ ಸರ್ಕಾರದಿಂದ ಪ್ರಮಾಣ ಪತ್ರ ಪ್ರಶಸ್ತಿ ಲಭಿಸಿದೆ.

ಈಗಾಗಲೇ ಮೂರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ “ಅಡವಿ”, ಕರ್ನಾಟಕದ ಸಾಂಸ್ಕೃತಿಕ ನಾಡಹಬ್ಬ ದಸರಾ ಉತ್ಸವದಲ್ಲಿ ದೊರೆತ ಈ ಗೌರವದಿಂದ ಮತ್ತಷ್ಟು ಕೀರ್ತಿಗೆ ಪಾತ್ರವಾಗಿದೆ.

ಪ್ರಶಸ್ತಿ ಸ್ವೀಕರಿಸಿದ ನಂತರ ಸಂತಸ ಹಂಚಿಕೊಂಡ ನಿರ್ದೇಶಕ–ನಿರ್ಮಾಪಕ ಟೈಗರ್ ನಾಗ್ ಅವರು,“ಈ ಯಶಸ್ಸಿಗೆ ಶ್ರಮಿಸಿದ ಕಲಾವಿದರು ಮತ್ತು ತಂತ್ರಜ್ಞರಿಗೂ ಹೃತ್ಪೂರ್ವಕ ಧನ್ಯವಾದಗಳು. ಈ ಪ್ರಶಸ್ತಿಯನ್ನು ನಾನು ನಮ್ಮ ಪೂರ್ವಿಕರಾದ ನಾಡದೊರೆ ಮಹಿಷಾಸುರ ಹಾಗೂ ಸಂವಿಧಾನ ಶಿಲ್ಪಿ ಪರಮಪೂಜ್ಯ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅರ್ಪಿಸುತ್ತಿದ್ದೇನೆ” ಎಂದು ಹೇಳಿದರು.

ಚಿತ್ರರಂಗದೊಂದಿಗೆ ಸಾಮಾಜಿಕ ಹೋರಾಟಗಾರರೂ ಆಗಿರುವ ಟೈಗರ್ ನಾಗ್ ಅವರು ಸುವರ್ಣ ಯುಗ ಕನ್ನಡ ದಿನಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*