
ಮುಸ್ಟುರು: ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ ಮಟ್ಟದ, ಒಕ್ಕೂಟದಿಂದ ಸಿಗುವ ಸೌಲಭ್ಯಗಳಿಂದ ಸ್ಥಳೀಯವಾಗಿ ಸಣ್ಣದಾದ ಉದ್ಯಮ ಪ್ರಾರಂಭಿಸಿ ಎಂದು ಎನ್ ಆರ್ ಎಲ್ ಎಮ್ ತಾಲೂಕು ವ್ಯವಸ್ಥಾಪಕ ಕೃಷಿಯೇತರಾದ ಪಂಪಾಪತಿ ಕರಡೋಣಿ ಹೇಳಿದರು.
ತಾಲೂಕಿನ ಮುಸ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತಾಮ್ರಪಲ್ಲಿ ಕ್ಯಾಂಪ್ ನಲ್ಲಿ ಸ್ಪಂದನ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ ಮಟ್ಟದ, ಒಕ್ಕೂಟದಿಂದ ಶುಕ್ರವಾರದಂದು ಆಯೋಜಿಸಿದ್ದ, ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸ್ವಾವಲಂಬನೆ ಜೀವನ ಸಾಗಿಸಲು ಯೋಜನೆಗಳಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಸಂಜೀವಿನಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ, ಈ ಯೋಜನೆಯು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಲಾಗುತ್ತಿದೆ. ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದ, ಒಕ್ಕೂಟದ ಸದಸ್ಯರೆಲ್ಲರು ಇದರ ಲಾಭ ಪಡೆಯಿರಿ ಎಂದರು.
ತಾ.ಪಂ ನರೇಗಾ ಐಇಸಿ ಸಂಯೋಜಕ ಸೋಮನಾಥ ಗೌಡರ್ ಅವರು ಮಾತನಾಡಿ ನರೇಗಾ ಯೋಜನೆಯಡಿ ನರೇಗಾ ಯೋಜನೆಯಡಿ ನೋಂದಾಯಿತ ಸಕ್ರಿಯ, ಜಾಬ್ ಕಾರ್ಡ್ ಗಳಲ್ಲಿನ ಕೂಲಿಕಾರರು ಕಡ್ಡಾಯವಾಗಿ ಎನ್.ಎಮ್.ಎಮ್.ಎಸ್ ಇ-ಕೆವೈಸಿ ಯನ್ನು ಇದೇ ಸೆ.30 ರೊಳಗಾಗಿ ಮಾಡಿಕೊಳ್ಳಬೇಕು. ನರೇಗಾ ಕೂಲಿಕಾರರ ಹಾಜರಾತಿಯನ್ನು ಪಾರದರ್ಶಕವಾಗಿ ಸೆರೆಹಿಡಿಯಲು ನೂತನ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಲಾಗಿದೆ. ಇಕೆವೈಸಿಯನ್ನು ಗ್ರಾ.ಪಂ ಹಂತದಲ್ಲಿ ಅಭಿಯಾನಗಳ ಮೂಲಕ ಹಮ್ಮಿಕೊಂಡು ಪ್ರಗತಿ ಸಾಧಿಸಲಾಗುತ್ತದೆ ಎಂದರು.
ಒಕ್ಕೂಟದ ಅಧ್ಯಕ್ಷೆ ಕೃಪ ಅವರು ಮಾತನಾಡಿ ಸರ್ಕಾರದಿಂದ ಮಹಿಳೆಯರ ಜೀವನೋಪಾಯನಕ್ಕೆ ಸಾಕಷ್ಟು ಯೋಜನೆಗಳಿಂದ ಸಬ್ಸಿಡಿ ರೂಪದಲ್ಲಿ ಲೋನ್ ಗಳನ್ನು ನೀಡಲಾಗುತ್ತಿದೆ, ಸಂಘದ ಸದಸ್ಯರಿಗೆ ಸ್ಥಳೀಯವಾಗಿ ವ್ಯಾಪಾರ ವಹಿವಾಟು ನಡೆಸುವ ನೆರವು ನೀಡುತ್ತಿದ್ದಾರೆ ಇದರ ಸದುಪಯೋಗ ಪಡೆಯಿರಿ ಎಂದರು.
ಈ ವೇಳೆ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟದ ಕಾರ್ಯದರ್ಶಿ ಜಿ.ರಾಧ, ಖಜಾಂಚಿ ವೀರಲಕ್ಷ್ಮೀ, ಎಂಬಿಕೆ ರಜೀಯಾ ಬೇಗಂ, ಎಲ್ ಸಿಆರ್ಪಿ ಸುಜಾತ, ಭಾರತಿ, ಎಫ್ ಎಲ್ ಸಿಆರ್ಪಿ ಶರಣಮ್ಮ, ಸದಸ್ಯರಾದ ಪಿ.ಲಕ್ಷ್ಮೀ, ಪಿ.ಇಂದಿರಾ, ಮುಸ್ಟೂರು ಪ್ರಾ.ಮಿ.ಆ.ಕೇ. ಎಚ್ಐಓ ಬಸವರಾಜ್, ಟಿಎಚ್ ಸಿಓ ಕರಿಬಸಮ್ಮ, ಪ್ರಮುಖರಾದ ವೆಂಕಟರಾವ್ ಸೂರ್ಯಬಾಬು, ರಾಜು ಸೇರಿದಂತೆ ನರೇಗಾ ಕೂಲಿಕಾರರು, ಮಹಿಳಾ ಸಂಘದವರಿದ್ದರು.
