ವಾಣಿಜ್ಯ LPG ಸಿಲಿಂಡರ್‌ ಗಳ ಬೆಲೆ 51.50 ರೂ. ಇಳಿಕೆ

ಭಾಸ್ಕರ ಪತ್ರಿಕೆ
0

ನವದೆಹಲಿ: 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಭಾನುವಾರ 51.50 ರೂ. ಇಳಿಕೆಯಾಗಿದ್ದು, ಇದರಿಂದ ಹೊಟೇಲ್ ಹಾಗೂ ರೆಸ್ಟೋರೆಂಟ್, ಆಹಾರೋದ್ಯಮಗಳಿಗೆ ಸ್ವಲ್ಪಮಟ್ಟಿನ ರಿಲ್ಯಾಕ್ಸ್ ದೊರಕಿದೆ.

ದೇಶೀಯ ತೈಲ ಮಾರುಕಟ್ಟೆ ಕಂಪನಿಗಳು ಬೆಲೆ ಇಳಿಕೆ ಮಾಡಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ (ಸೆಪ್ಟೆಂಬರ್ 1) ರಿಂದ ಜಾರಿಗೆ ಬಂದಿವೆ.

ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ 1,580 ರೂ. ಆಗಿದ್ದು, ಪ್ರತಿ ಸಿಲಿಂಡರ್‌ಗೆ 51.50 ರೂ.ಗಳ ಕಡಿತ ಆಗಿದೆ.

ಬೆಂಗಳೂರಿನಲ್ಲಿ ವಾಣಿಜ್ಯ ಬಕೆಯ ಎಲ್ ​ಪಿಜಿ ಸಿಲಿಂಡರ್ ಬೆಲೆ ಈ 51.50 ರೂ. ಇಳಿಕೆಯೊಂದಿಗೆ 1,653 ರೂ. ಆಗಿದೆ. ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಈಗಿರುವ 855.50 ರೂ. ಮುಂದುವರಿದಿದೆ.

ಗೃಹ ಬಳಕೆಯ ಎಲ್​ ಪಿಜಿ ಸಿಲಿಂಡರ್ 5 ಕೆಜಿಗೆ 318.50 ರೂ. ಆಗಿದೆ. ವಾಣಿಜ್ಯ ಬಕೆಯ ಎಲ್​ಪಿಜಿ ಸಿಲಿಂಡರ್ 47.5 ಕೆಜಿದಕ್ಕೆ 4,129 ರೂ. ಆಗಿದೆ. ಅಂದರೆ, ಇದರ ಬೆಲೆ 127 ರೂ. ಇಳಿಕೆಯಾಗಿದೆ.

ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮನೆಗಳಲ್ಲಿ ಅಡುಗೆಗೆ ಬಳಸುವ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಯಾಸ್ಥಿತಿ ಕಾಯ್ದಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*