ತಿಪಟೂರು: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ವಿದ್ಯಾನಿಧಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಶ್ರುತ ಬಿ ಆರ್. ಇವರು 600 ಅಂಕಗಳಿಗೆ 564 ಅಂಕಗಳನ್ನು ಗಳಿಸಿ ಪ್ರತಿಶತ 94 % ಅಂಕಗಳಿಸಿ ಉತ್ತೀರ್ಣರಾದ ಈ ವಿದ್ಯಾರ್ಥಿನಿಗೆ ಕಲ್ಪತರು ನಾಡು ತಿಪಟೂರು ತಾಲೂಕಿನ ಕರ್ಣ ಶ್ರೀ ಸತ್ಯ ಕುಮಾರ್ ರಿಲೀಫ್ -ಫೌಂಡೇಶನ್ ಅಧ್ಯಕ್ಷರು ವಿವಿಧ ದಾಸೋಹಿ ಕಲ್ಪತರು ರತ್ನ ಡಾಕ್ಟರ್ ಜಿ ಎಸ್ ಶ್ರೀಧರ್ ಅವರು ಹರಸಿ ಹಾರೈಸಿ ಶುಭ ಕೋರಿ ಇಂತಹ ಮಕ್ಕಳಿಗೆ ಹೆಚ್ಚಿನ ಮಾರ್ಗದರ್ಶನ ಕೊಟ್ಟು ಉನ್ನತ ವಿದ್ಯಾಭ್ಯಾಸ ನೀಡಿದರೆ ಭವಿಷ್ಯದಲ್ಲಿ ಮುಂದೊಂದು ದಿನ ಇವರು ಮುಂದಿನ ಪೀಳಿಗೆಗೆ ಮಾದರಿಯಾಗುತ್ತಾರೆ ತುಂಬಾ ಕಷ್ಟಪಟ್ಟು ಓದಿ ಇಷ್ಟು ಅಂಕಗಳನ್ನ ಗಳಿಸಿರುವುದು ತುಂಬಾ ಸಂತೋಷದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.. ನಂತರ ಇವರ ಧರ್ಮಪತ್ನಿಯಾದ ಡಾ. ಮೀರಾ ಶ್ರೀಧರ್ ರವರು ಮಾತನಾಡಿ ಇಂದಿನ ಪೀಳಿಗೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚೆಚ್ಚು ವಿದ್ಯಾವಂತರಾಗಬೇಕು ಈ ಸಮಾಜಕ್ಕೆ ಹೆಜ್ಜೆ ಮಾದರಿ, ಹೆಣ್ಣು ಮಕ್ಕಳು ಸಶಕ್ತರಾಗಬೇಕು ಯಾರಿಗೂ ಅವಲಂಬಿತರಾಗದೆ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎಂದರು. ಲಿಂಗಾಯಿತ ಮಹಾಸಭಾ ಹಾಸನ ಜಿಲ್ಲಾಧ್ಯಕ್ಷರಾದನವಿಲೆ ಪರಮೇಶ್‌ರವರು ಕರೆ ಮಾಡಿ ಶುಭಾಶಯ ಕೋರಿ ಹೆಣ್ಣು ಮಕ್ಕಳು ಸಂಸ್ಕಾರವಂತರಾಗಿ ಹೆತ್ತ ತಂದೆ ತಾಯಿಯರಿಗೆ ಕೀರ್ತಿ ತರಬೇಕು ಎಂದರು. ಮತ್ತೋರ್ವ ಮುಖಂಡರಾದ ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಕರೆ ಮಾಡಿ,ಹೆಣ್ಣು ಮಗಳ ಈ ಸಾಧನೆ ನೋಡಿ ತುಂಬಾ ಸಂತೋಷವಾಯಿತು ತುಂಬಾ ಕಷ್ಟಪಟ್ಟು ಓದಿದ ನಿನಗೆ ಶುಭಾಶಯಗಳು ಎಂದರು, ಆದಿ ಜಾಂಬವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರು ಕರೆ ಮಾಡಿ ವಿದ್ಯೆ ಯಾರ ಸ್ವತ್ತಲ್ಲ ಕಷ್ಟಪಟ್ಟು ಓದಿದರೆ ಮಾತ್ರ ಈ ಫಲಿತಾಂಶ ಬರಲು ಸಾಧ್ಯ ಎಂದರು ಹಾಗೆ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ಜಿಲ್ಲಾಧ್ಯಕ್ಷರಾದ ಡಾ. ಭಾಸ್ಕರ್ ಈ ವಿದ್ಯಾರ್ಥಿನಿಯ ಸಾಧನೆಗೆ ಶುಭ ಕೋರಿದರು. ಗಣ್ಯರು ಸ್ನೇಹಿತರು ಬಂಧುಗಳು ಹಾಗೂ ಕಾಲೇಜು ಆಡಳಿತ ಮಂಡಳಿ ಇನ್ನು ಮುಂತಾದವರು ಶುಭ ಕೋರಿದರು ಸದರಿ ವಿದ್ಯಾರ್ಥಿನಿ ಶ್ರುತ ಬಿ ಆರ್ ರವರು ಕಸಬಾ ಹೋಬಳಿ ಕುಗ್ರಾಮ ಬೆಣ್ಣೆನಹಳ್ಳಿ ಗ್ರಾಮದ ಟಿ ರಾಜು ಮತ್ತು ದಾಕ್ಷಾಯಿಣಿಯವರ ಸುಪುತ್ರಿ ಇವರ ತಂದೆ ಪ್ರಸ್ತುತ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ತಾಲೂಕ ಅಧ್ಯಕ್ಷರು ಹಾಗೂ ಅಧ್ಯಕ್ಷರು ಪ್ರಿಂಟ್ &ಮೀಡಿಯಾ ಸೋಶಿಯಲ್ ಮೀಡಿಯಾ ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ 600 ಕ್ಕೆ564 ಅಂಕಗಳನ್ನ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿನಿಗೆ ಹರಸಿ ಹಾರೈಸಿ ಶುಭ ಕೋರಿದ KERA ಘಟಕದ ತುಮಕೂರು ಜಿಲ್ಲಾಧ್ಯಕ್ಷರಾದ ಡಾ. ಭಾಸರ್ ಮತ್ತು ಸಂಘದ ಪಧಾಧಿಕಾರಿಗಳು
ಏಪ್ರಿಲ್ 11, 2026
0
Tags
