ತಿಪಟೂರು: ಇಂದು ಕೇಂದ್ರ ಸರ್ಕಾರ ರೈಲ್ವೆ ರಾಜ್ಯ ಖಾತೆ ಸಚಿವರಾದ ಶ್ರೀ ವಿ ಸೋಮಣ್ಣ ಅವರು ಕಲ್ಪತರು ನಾಡು ತಿಪಟೂರಿನ ಕಲ್ಪತರು ಇಂಜಿನಿಯರಿಂಗ್ ಕಾಲೇಜ್ ನ ಸಭಾಂಗಣದಲ್ಲಿ ಜನ ಸಂಪರ್ಕ ಕಾರ್ಯಕ್ರಮ ಏರ್ಪಡಿಸಿ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಯನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಪರಿಹರಿಸಲು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ AIRTU ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದಂತಹ ಶ್ರೀ ಕಾಂತರಾಜು ಎ ವಿ ಮತ್ತು ಸಂಘಟನೆಯ ವಿವಿಧ ಪದಾಧಿಕಾರಿಗಳು ಭಾರತ ದೇಶದ ನಾಲ್ಕು ಲಕ್ಷ ಟ್ರ್ಯಾಕ್ ಮ್ಯಾನ್ ಗಳ ವಿವಿಧ ಬಹುದಿನದ ಬೇಡಿಕೆಗಳನ್ನು ಅವರ ಮುಂದೆ ಇಟ್ಟು ಚರ್ಚಿಸಿದರು, ಸಮಸ್ಯೆನ್ನು ಹರಿತ ಸಚಿವರು ಆದಷ್ಟು ಬೇಗ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಕೆಲವೊಂದು ಸಮಸ್ಯೆಗಳನ್ನು ಸದ್ಯದಲ್ಲಿ ಬಗೆಹರಿಸುವಂತೆ ಸೂಕ್ತ ಭರವಸೆ ನೀಡಿದರು, ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಡಾಕ್ಟರ್ ಭಾಸ್ಕರ್, ಪತ್ರಕರ್ತರು, ರೈಲ್ವೆ ಇಲಾಖೆ ಸಿಬ್ಬಂದಿಗಳು, ಸರ್ಕಾರಿ ನೌಕರರು, ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default

