ತಿಪಟೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಿಬ್ಬನಹಳ್ಳಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ 7-12-2024 ಶನಿವಾರದಂದು ಕಿಬ್ಬನಹಳ್ಳಿ ಕ್ರಾಸ್ ನಲ್ಲಿರುವ ಶ್ರೀಮದ್ ರಂಭಾಪುರಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ತಾಲೂಕು ಮಟ್ಟದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿಗಳು ಸಂಸ್ಕೃತಿ ಚಿಂತಕರು ಮತ್ತು ಶಿಕ್ಷಣ ಇಲಾಖೆಯ ಹಲವಾರು ಸ್ತರಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಬಾಲ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ಬಿಳಿಗೆರೆ ಕೃಷ್ಣಮೂರ್ತಿ ರವರನ್ನು ಶುಕ್ರವಾರ ಇಳಿಹೊತ್ತಿನಲ್ಲಿ ಬಿಳಿಗೆರೆ ಗ್ರಾಮದ ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಶ್ರೀಯುತರಿಗೆ ಗೌರವಾಭಿಮಾನಪೂರ್ವಕವಾಗಿ ಸಾಹಿತ್ಯ ಸಮ್ಮೇಳನಕ್ಕೆ ಅಧಿಕೃತವಾಗಿ ಆಮಂತ್ರಣ ನೀಡಲಾಯಿತು ಈ ಸಂದರ್ಭದಲ್ಲಿ ಬಿಳಿಗೆರೆಯ ಹಿರಿಯ ಮುಖಂಡರಾದ ಗಂಗಾಧರಯ್ಯನವರು, ಶ್ರೀಮತಿ ಮಂಜುಳಾ ಬಿಳಿಗೆರೆ ಕೃಷ್ಣಮೂರ್ತಿ, ಎಂ ಬಸವರಾಜಪ್ಪ ಕ.ಸಾ.ಪ ಅಧ್ಯಕ್ಷರು, ಅಧ್ಯಕ್ಷರಾದ ರೈತಕವಿ ಪಿ. ಶಂಕರಪ್ಪ ಬಳ್ಳೇಕಟ್ಟೆ ಕಿಬ್ಬನಹಳ್ಳಿ ಹೋಬಳಿ, ಮಂಜಪ್ಪ ಕ.ಸಾ.ಪ ತಾಲೂಕು ಕಾರ್ಯದರ್ಶಿಗಳು, ಮಡೆನೂರು ಸೋಮಶೇಖರ್ ಕ.ಸಾ.ಪ ಕೋಶಾಧ್ಯಕ್ಷರು, ಬಸವರಾಜು ಕಲ್ಪಶ್ರೀ ತಂಡದ ಅಧ್ಯಕ್ಷರು, ಗುರುಬಸಮ್ಮ ವಿಘ್ನಸಂತೆ ಖ್ಯಾತ ಕಲಾವಿದರು, ಚಿದಾನಂದ್ ಬಿಳಿಗೆರೆ ಅಧ್ಯಕ್ಷರು ಹೊನ್ನಾಮ್ಮ ದೇವಾಲಯ, ಬಸವರಾಜು ಸಿ.ಇ.ಒ ಪ್ರಾ.ಕೃ.ಸ ಬ್ಯಾಂಕ್ ಬಿಳಿಗೆರೆ, ದಿವಾಕರ್ ಕ.ಸಾ.ಪ ಸಂಘಟನಾ ಕಾರ್ಯದರ್ಶಿ, ಶಾರದಮ್ಮ, ಶುಭ ವಿಶ್ವಕರ್ಮ ಭಾಸ್ಕರ ಟಿವಿ ಯೂಟ್ಯೂಬ್ ಮಾಧ್ಯಮದ ಸುದ್ದಿವಾಚಕರು, ಬ್ರಹ್ಮಮುಖಿ ರವೀಶ್ ಬಾಣಸಂದ್ರ, ಬಿಳಿಗೆರೆ ರವಿ DSS ಮುಖಂಡರು, ಮಮತ ಯೋಗಿ ಶಿಕ್ಷಕರು, ಸುಧಾ ಕಾರ್ಯದರ್ಶಿ, ನಾಟಿವೈದ್ಯರಾದ ಬಿಳಿಗೆರೆ ಗಂಗಾಧರ್, ಗ್ರಂಥಪಾಲಕರಾದ ವೇದವತಿ ಬಿಳಿಗೆರೆ, ಅಂಗನವಾಡಿ ಶಿಕ್ಷಕರಾದ ಪವಿತ್ರ, ಬಿಳಿಗೆರೆ ಕೃಷ್ಣಮೂರ್ತಿ ಹಾಗೂ ಕನಕ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default

