ದೇವದಾಸಿಯರ ಆರೋಗ್ಯ ತಪಾಸಣೆ ಕಾರ್ಯಕ್ರಮ

ಭಾಸ್ಕರ ಪತ್ರಿಕೆ
0


ಕೊಟ್ಟೂರು: ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಕೊಟ್ಟೂರು ತಾಲೂಕು ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಮಾಜಿ ದೇವದಾಸಿ ಪುನರ್ವಸತಿ ಯೋಜನೆ ಅಧಿಕಾರಿಗಳಾದ ನಾರಾಯಣ ಸರ್ ಮಾತನಾಡುತ್ತಾ, ಮಾಜಿ ದೇವದಾಸಿಯರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಪೌಷ್ಠಿಕಾಂಶದ ಆಹಾರವನ್ನು ಸೇವಿಸಲು ಮತ್ತು ಜಂಕ್ ಫುಡ್ ಗಳನ್ನು ಸೇವಿಸಬಾರದು. ಮನೆಯಲ್ಲಿ ತರಕಾರಿ ಹಣ್ಣು ಹಂಪಲುಗಳನ್ನು ಸ್ವಚ್ಛವಾಗಿ ಶುಚಿಗೊಳಿಸಿ ಸೇವಿಸಬೇಕು.

ತರಕಾರಿಗಳನ್ನು ಹೆಚ್ಚು ಸೇವಿಸುವುದರಿಂದ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು, ಏಕದಳ ದ್ವಿದಳ ಧಾನ್ಯಗಳನ್ನು ನಿಯಮಿತವಾಗಿ ಬಳಸುವುದರಿಂದ ಆರೋಗ್ಯದ ಹಿತವನ್ನು ಕಾಪಾಡಿಕೊಳ್ಳಬಹುದು ಎಂದರು. ಆರೋಗ್ಯದ ಕಾಳಜಿ ವಹಿಸುವುದರಿಂದ ರೋಗಗಳಿಂದ ದೂರವಿರಬಹುದು ಅಲ್ಲದೇ ಆರೋಗ್ಯದ ಹಿತವನ್ನು ಕಾಪಾಡುವಾಗ ವಹಿಸಬೇಕಾದ ಕ್ರಮಗಳನ್ನು ತಿಳಿಸಿದರು.

ಪ್ರತೀಯೊಬ್ಬರು ಪ್ರತೀದಿನವೂ ಮನಸ್ಸನ್ನು ಆಹ್ಲಾದಕರವಾಗಿಟ್ಟುಕೊಳ್ಳಬೇಕು, ಸುಖಾಸುಮ್ಮನೇ ಯಾವುದೇ ಚಿಂತೆಗಳನ್ನು ಮಾಡದೇ ತಮ್ಮ ಕೆಲಸವನ್ನು ಮಾಡಿಕೊಂಡು ಜೀವನವನ್ನು ನಡೆಸಬೇಕು ಎಂದರು. ಆರೋಗ್ಯ ಅಧಿಕಾರಿಗಳಾದ ಪಿಬಿ ನಾಯಕ್, ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ರೇಣುಕಮ್ಮ ಕೊಟ್ಟೂರು ತಾಲೂಕು ದೇವದಾಸಿ ಸಂಘಟನೆ ತಾಲೂಕ್ ಅಧ್ಯಕ್ಷರು ಬಿ ರೇಣುಕಮ್ಮ ಶಿವರಾಜ್ ಸರ್ ಮನೋಜ್ ಸರ್ 50ಕ್ಕೂ ಹೆಚ್ಚು ದೇವದಾಸಿ ಮಹಿಳೆಯರು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*