ಧಾರವಾಡದ ರೈತರ ಪಹಣಿಯಲ್ಲೂ ವಕ್ಫ್‌

ಭಾಸ್ಕರ ಪತ್ರಿಕೆ
0



ಧಾರವಾಡತಾಲೂಕಿನ ಉಪ್ಪಿನಬೇಟಗೇರಿ ಗ್ರಾಮದ ರೈತರ ಪಹಣಿಗಳಲ್ಲೂ ವಕ್ಫ್ ಹೆಸರು ದಾಖಲಾಗಿದೆ.ಈಗ ಇದ್ದಕ್ಕಿದ್ದಂತೆ ಕೆಲವು ಗೊಂದಲದ ಮಾತುಗಳನ್ನು ಸಚಿವ ಜಮೀರ್‌ ಅಹಮದ್ ಖಾನ್‌ ಸಭೆಯಲ್ಲಿ "ದೇವರು ಭೂಮಿಗೆ ಕಳಿಸಿ ಏನು ಮಾಡಿದೆ ನಿಮಗೆ ಸಚೀವರನ್ನಾಗಿ ಮಾಡಿದಾಗ ಎಂದರೇ ಉತ್ತರ ಕೊಡಬೇಕು, ಸೈತಾನ್‌ ನೋಡಿದರೂ ಇದು ವಕ್ಪ್‌ ಆಸ್ತಿ ಅನ್ನಬೇಕು" ಎಂದು ನುಡಿದಿದ್ದು, ಹಲವು ತಹಶೀಲ್ದಾರರಿಂದ ರೈತರಿಗೆ ನೋಟಿಸ್‌ ತಲುಪಿ, ಕೊನೆಗೆ ತಹಶೀಲ್ದಾರ್‌ ಮೇಲೆ ಕ್ರಮಕ್ಕೆ ಆಗ್ರಹಿಸಿ, ತಹಶೀಲ್ದಾರರದ್ದೇ ತಪ್ಪು ಎಂದು ಹೊಣೆಗಾರಿಕೆ ಹೆಗಲು ಬದಲಿಸೋ ಸಮಯವಾಗಿರುವ ಲಕ್ಷಣವೂ ಆಗಿರಬಹುದು, ಮುಡಾ ಹಗರಣ ಹೊಡೆತದ ಜೊತೆ ಸಿಎಂ ಗೆ ಈ ಬೇರೆ ಕಿರಿಕಿರಿ ಬೇಕೆ...? ಎಂಬುದು ಜನರ ಮಾತಾಗಿದೆ.

ಸಧ್ಯ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತ ಬಂದಿರುವ ರೈತರಿಗೆ ಇದು ಬಿಗ್ ಶಾಕ್ ನೀಡಿದ್ದು, ವಕ್ಫ್ ಕಾಯ್ದೆ ಚರ್ಚೆ ಶುರುವಾಗಿ ಏಕಾಏಕಿಯಾಗಿ ರೈತರ ಪಹಣಿ ಪತ್ರದಲ್ಲಿ ವಕ್ಫ ಆಸ್ತಿಗೆ ಒಳಪಟ್ಟಿದೆ ಎಂದು ನಮೂದಾಗಿದೆ.  ಪಹಣಿ ಪತ್ರದ 11 ನೇ ಕಾಲಂ‌ನಲ್ಲಿ ಈ ಹೆಸರು ದಾಖಲಾಗಿದೆ.

(1)ಸರ್ವೇ ನಂ 20, ಮರಬಸಪ್ಪ ಮಲ್ಲಪ್ಪ ಮಸೂತಿ 3 ಎಕರೆ 13 ಗುಂಟೆ, (2) ಸರ್ವೇ ನಂ 141/2, ಜವಳಗಿ ಬಾಳಪ್ಪ ರುದ್ರಪ್ಪ 26ಗುಂಟೆ, ಸರ್ವೇ ನಂ 141/3 ಜವಳಗಿ ಸರೋಜಾ ಕೊಂ ಕರಿಬಸಪ್ಪ 2ಎಕರೆ 12ಗುಂಟೆ. ಸರ್ವೇ ನಂ 141/4 ಜವಳಗಿ ಗಂಗಪ್ಪ ರುದ್ರಪ್ಪ 3ಎಕರೆ 21ಗುಂಟೆ ರೈತರ ಪಹಣಿಗಳಲ್ಲಿ ವಕ್ಫ್ ಹೆಸರು ಪ್ರಕಟಿಸಲಾಗಿದೆ.ಸದ್ಯ ವಕ್ಫ್ ಹೆಸರು ಸೇರ್ಪಡೆಯಾಗಿದ್ದಕ್ಕೆ ಕಂಗಾಲಾದ ರೈತರು, ಧಾರವಾಡ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.  4 ರೈತರ ಪಹಣಿ ಪತ್ರದಲ್ಲಿ ವಕ್ಫ್ ಹೆಸರು ದಾಖಲು ಆಗಿರುವುದು ಗೊಂದಲಕ್ಕೆ ಕಾರಣವಾಗಿದೆ. ವಿಜಯಪುರದಲ್ಲಿಯೂ ಸಹ ಇದೆ ರೀತಿ ವಕ್ಫ್ ಹೆಸರು ದಾಖಲಾಗಿತ್ತು. ಇದೀಗ ಧಾರವಾಡ ಜಿಲ್ಲೆಯಲ್ಲಿಯೂ ಸಹ ರೈತರ ಹೆಸರಿನ ಜಾಗದಲ್ಲಿ ವಕ್ಫ್ ಹೆಸರು ದಾಖಲಾಗಿರುವುದು ಈಗ ಬೆಳಕಿಗೆ ಬಂದಿದೆ.

ಹೀಗಾಗಿ ಮತ್ತಷ್ಟು ರೈತರಿಂದ ಪಹಣಿ ಪತ್ರ ಪರಿಶೀಲನೆ ಕಾರ್ಯ ಆರಂಭಗೊಂಡಿದೆ. ಹಲವು ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಬಂದಿರಬಹುದು ಎಂದು ರೈತರಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.ನಮ್ಮ ಆಸ್ತಿ ನಮ್ಮ ಹಕ್ಕು, ಅದು ಯಾವಾಗಿದ್ದರು ನಮ್ಮದೇ ಎಂದು ಆಗಬೇಕೆಂಬುದು ರೈತರ ಒತ್ತಾಯವಾಗಿದೆ. ಈ ವಕ್ಫ್‌ ಎಂದ ಬಿಸಿ ಇನ್ನೂ ಎಷ್ಟು ಜನ ರೈತರಿಗೆ ತಾಗಬಹು ಎಂಬುದನ್ನು ಕಾದುನೋಡಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*