ತಿಪಟೂರು: ಅ.29 ಮರೆಯಲಾಗದ ಮಾಣಿಕ್ಯ. ನಮ್ಮ-ನಿಮ್ಮೆಲ್ಲರ ಅಚ್ಚುಮೆಚ್ಚಿನ ಕರುನಾಡ ಕಣ್ಮಣಿ. ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ವಿಜೇತರಾದ ಪವರ್ ಸ್ಟಾರ್ "ಪುನೀತ್ ರಾಜ್ ಕುಮಾರ್"ರವರ 3ನೇ ಪುಣ್ಯ ತಿಥಿಯನ್ನು ಇಂದು ನಗರದ ಶಿವಕುಮಾರ ಸ್ವಾಮೀಜಿ ವೃತ್ತ (ಹಾಸನ್ ಸರ್ಕಲ್)ನ ಭಾಸ್ಕರ ಪತ್ರಿಕೆ ಕಚೇರಿ ಆವರಣದಲ್ಲಿ ಆಚರಿಸಲಾಯಿತು.
ಈ ಸಂಧರ್ಭ ಹಿರಿಯ ಪತ್ರಕರ್ತ ಭಾಸ್ಕರ್ ಮಾತನಾಡಿ ಪುನೀತ್ ಬದುಕಿನ ಕೊನೆಯ ಹಿಟ್ ಚಿತ್ರ "ಗಂಧದ ಗುಡಿ" ಬಿಡುಗಡೆಯಾಗಿ ಇಂದಿಗೆ 2ವರ್ಷ ಪೂರ್ಣಗೊಂಡಿದೆ, ನಾಡಿನ ಸಮಸ್ತ ಜನತೆ ಚಲನಚಿತ್ರವನ್ನು ಅಮೇಜಾನ್ ಪ್ರೈಮ್ ನಲ್ಲಿ ನೋಡಿ ಇನ್ನೊಮ್ಮೆ ಆನಂದಿಸಬೇಕೆಂದರು. ತಾವು ಕೂಡ ಇಂದು "ಗಂಧದ ಗುಡಿ" ಚಲನಚಿತ್ರವನ್ನು ವೀಕ್ಷಿಸುವುದಾಗಿ ಹೇಳಿಕೊಂಡರು.
ಕಾರ್ಯಕ್ರಮದಲ್ಲಿ ಭಾಸ್ಕರ ಪತ್ರಿಕಾ ಬಳಗದ ಸದಸ್ಯರು, ಭಾಸ್ಕರ ಪತ್ರಿಕೆ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್, ನಿವೃತ ಎಲ್.ಐ.ಸಿ ಅಧಿಕಾರಿ ಜಯದೇವಪ್ಪ, ನಂದಿನಿ ಹಾಲಿನ ವಿತರಕರು ಭವಾನಿ ಶಂಕರ್, ಶ್ರೀಮತಿ ಶುಭ ವಿಶ್ವಕರ್ಮ ಹಾಗೂ ಅಪ್ಪು ಅಭಿಮಾನಿಗಳು ಇದ್ದರು.
