ಮಂಗಳೂರು: ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಹೌಹಾರಿದರು,ಕೃಷ್ಣವೇಣಿ ಅವರ ಬಳಿ 11.93 ಕೋಟಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ.
5 ಸ್ಥಳಗಳಲ್ಲಿ ಶೋಧ:
ಕೃಷ್ಣವೇಣಿ ಅವರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸ್ ಶೋಧನೆ ನಡೆಸಿದ್ದಾರೆ .
3 ನಿವೇಶನಗಳು,
ಬೆಂಗಳೂರಿನ ಯಲಹಂಕದಲ್ಲಿ 1 ಫ್ಲಾಟ್,
ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣ,
26 ಎಕರೆ ಕೃಷಿ ಜಮೀನು (ಕಾಫಿ ಪ್ಲಾಂಟೇಷನ್) ಆಸ್ತಿಯನ್ನು ಕೃಷ್ಣವೇಣಿ ಹೊಂದಿದ್ದಾರೆ.
ಎಲ್ಲಾ ಸೇರಿ ಒಟ್ಟು ಮೌಲ್ಯ 10,41,38,286 ರೂ. ಇದೆ.
56,450 ನಗದು, 66,71,445 ರೂ. ಬೆಲೆ ಬಾಳುವ ಚಿನ್ನಾಭರಣಗಳು, 60,00,000 ರೂ. ಮೌಲ್ಯದ ವಾಹನಗಳು, 24,40,000 ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.. ಎಲ್ಲಾ ಸೇರಿ ಒಟ್ಟು ಮೌಲ್ಯ 1,51,67,895 ರೂ. ಇದೆ. ಸ್ಥಿರಾಸ್ತಿ ಹಾಗೂ ಚರಾಸ್ಥಿ ಸೇರಿ ಒಟ್ಟು 11,93,06,181 ರೂ. ಇದೆ.

