ತಿಪಟೂರು: ಶ್ರೀ ಜೈ ಮಾರುತಿ ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷರಾದ ಮಹೇಶ್ ಬಿ ಎಲ್ ಪತ್ರಿಕಾಗೋಷ್ಠಿ ನಡೆಸಿ ನಮ್ಮ ಸಂಘದ ವತಿಯಿಂದ ದಿನಾಂಕ 30.11.2024 ರ ಶನಿವಾರ ಸಮಯ 12:30ಕ್ಕೆ 3ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಇಂಡಿಸ್ಕೆರೆ ಗೇಟ್ ಗಾರ್ಮೆಂಟ್ಸ್ ಹತ್ತಿರ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ! ಸತ್ಯಕುಮಾರ್ ರಿಲೀಫ್ ಫೌಂಡೇಶನ್ ಅಧ್ಯಕ್ಷರು ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕಲ್ಪತರು ರತ್ನ, ತಿಪಟೂರು ಕರ್ಣ, ಬಸವ ಪ್ರಶಸ್ತಿ ಪುರಸ್ಕೃತರು ಬಡವರ ಬಂಧು ಡಾ!ಜಿ. ಎಸ್ ಶ್ರೀಧರ್ ಮತ್ತು ಬಡ ರೋಗಿಗಳ ಸೇವೆ ಮಾಡುತ್ತಿರುವ ಬಡವರ ಕಣ್ಮಣಿ ಹೃದಯ ರೋಗ ತಜ್ಞರು ಆದ ಡಾ! ರಕ್ಷಿತ್ ( ಸರ್ಕಾರಿ ವೈದ್ಯರು) ಉದ್ಘಾಟನೆ ಮಾಡಲಿದ್ದಾರೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ, ಷಡಕ್ಷರಿ ತಿಪಟೂರಿನ ಜನಪ್ರಿಯ ಶಾಸಕರು, ಅಧ್ಯಕ್ಷರು ಕೃಷಿ ಮತ್ತು ಭೂ ಅಭಿವೃದ್ದಿ ಬ್ಯಾಂಕ್ ಬೆಂಗಳೂರು ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಬಿ ಸಿ ನಾಗೇಶ್ ಮಾಜಿ ಶಾಸಕರು ತಿಪಟೂರು, ಶ್ರೀ ಲೋಕೇಶ್ವರ್ ಬಿಜೆಪಿ ಮುಖಂಡರು ತಿಪಟೂರು, ಶ್ರೀ ಕೆ ಟಿ ಶಾಂತಕುಮಾರ್ ಜೆಡಿಎಸ್ ಮುಖಂಡರು ತಿಪಟೂರು, ನಿಖಿಲ್ ಕಾಂಗ್ರೆಸ್ ಯುವ ಮುಖಂಡರು ತಿಪಟೂರು, ಪ್ರಸನ್ನ ಕುಮಾರ್ ಸಮಾಜಸೇವಕರು, ಹರೀಶ್ ತರಕಾರಿ ಯುವ ಮುಖಂಡರು, ಬಸವರಾಜು ಬಿ ಬಿ ಅಧ್ಯಕ್ಷರು ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ,ಮಂಜುಷ್ ಕೆ ಎಂ,ಪಿ ಡಿ ಓ ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ.ವಿಶೇಷ ಆಹ್ವಾನಿತರು : ಸಾರಿಗೆ ಅಧಿಕಾರಿಗಳು ತಿಪಟೂರು, ಆರಕ್ಷಕ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನಗರ ಮತ್ತು ಗ್ರಾಮಾಂತರ ಠಾಣೆಗಳು ತಿಪಟೂರು, ಬೆಸ್ಕಾಂ ಅಧಿಕಾರಿಗಳು ತಿಪಟೂರು, ಚಂದ್ರನ್ ಕೆ ವಿ ಎ ಜಿ ಎಂ ಎಚ್ ಆರ್ ಜಾಕಿ ಗಾರ್ಮೆಂಟ್ಸ್, ಲೋಕೇಶ್ ಎಚ್ಎನ್,ಎಚ್ ಆರ್ ವ್ಯವಸ್ಥಾಪಕರು ವೇರ್ ವೆಲ್ ಗಾರ್ಮೆಂಟ್ಸ್, ಬಾಲಾಜಿ ಕೊಕೊನಟ್ ಇಂಡಸ್ಟ್ರೀಸ್, ಪರಮೇಶ್ ನವಿಲೆ ಗುತ್ತಿಗೆದಾರರು ,ಈಶ್ವರ್, ಈಶ್ವರ್ ಮೋಟಾರ್ಸ್ ತಿಪಟೂರು, ಹರೀಶ್ ಸಿದ್ದು ಮೋಟಾರ್ಸ್ ತಿಪಟೂರು, ನಟರಾಜು ಕ್ವಿಕ್ ಅಂಡ್ ಶೈನ್ ವಾಟರ್ ಸರ್ವಿಸ್ ಇಂಡಿಸ್ಕೆರೆ ಗೇಟ್ ತಿಪಟೂರು ಇವರೆಲ್ಲ ಆಗಮಿಸಲಿದ್ದಾರೆ ಎಂದು ತಿಳಿಸಿ ಹಾಗೆ ಸಮಸ್ತ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಸಮಸ್ತ ಕನ್ನಡ ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ರಂಗಸ್ವಾಮಿ ಉಪಾಧ್ಯಕ್ಷರು, ಪುಟ್ಟೇಗೌಡರು ಖಜಾಂಚಿ, ಹರ್ಷಿತ್ ಕಾರ್ಯದರ್ಶಿ, ಜವರೇಗೌಡ, ಯತೀಶ್, ಅಂಬರೀಶ್, ನವೀನ್, ಹರೀಶ್, ಪ್ರದೀಪ್, ಲೋಕೇಶ್, ಮಧು, ನಾಗೇಶ ಶರತ್ ಮತ್ತು ಟಿ ರಾಜು ಇನ್ನು ಮುಂತಾದವರು ಹಾಜರಿದ್ದರು.
ವರದಿ: ಟಿ ರಾಜು ಬೆಣ್ಣೆನಹಳ್ಳಿ

