ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಕರಡಾಳು ಸಂತೆ ಮೈದಾನ ಶಾಲೆಯಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಲೆ ಮುಖ್ಯ ಶಿಕ್ಷಕ ಟಿ.ಕೆ. ಪಟ್ಟಾಭಿ ರಾಮು ಕನ್ನಡ ಕೇವಲ ಭಾಷೆಯಲ್ಲ ಇದು ನಮ್ಮೆಲ್ಲರ ಉಸಿರು ಜೀವ ಈ ಕನ್ನಡ ಭಾಷೆಯನ್ನು ನಾವೆಲ್ಲರೂ ಹೆಚ್ಚಾಗಿ ಬಳಸುವುದರ ಮೂಲಕ ಬೆಳೆಸಬೇಕು ಮತ್ತು ಕನ್ನಡ ವಿಶ್ವದಾದ್ಯಂತ ಪಸರಿಸುವಂತೆ ಮಾಡಲು ನಾವೆಲ್ಲರೂ ಕಂಕಣಭದ್ಧರಾಗಬೇಕು ಎಂದು ಕರೆ ನೀಡಿದರು .ಇದೇ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಕೆ. ಎಲ್ .ಗೋಪಿರವರು ಮಾತನಾಡಿ ಇಂದಿನ ಯುವ ಜನತೆ ಕನ್ನಡ ಭಾಷೆಯ ಬಗ್ಗೆ ಕೀಳಿರಿಮೆ ಬೆಳೆಸಿಕೊಂಡಿದ್ದಾರೆ ಕನ್ನಡ ಭಾಷೆ ಮಾತನಾಡುವುದು ನಮಗೆ ಗೌರವ ತರುವುದಿಲ್ಲ ಎಂದುಕೊಂಡಿದ್ದಾರೆ ಆದರೆ ನಮ್ಮ ತಾಯಿ ಭಾಷೆಯನ್ನ ಮಾತನಾಡಲು ಓದಲು ಬರೆಯಲು ಮಾತನಾಡಲು ಹೆಮ್ಮೆ ಪಡಬೇಕು ಏಕೆಂದರೆ ಇದು ನಮ್ಮ ತಾಯಿ ನುಡಿ ನಮ್ಮೆಲ್ಲರ ಜೀವನಾಡಿ ಎಂದು ಕರೆ ನೀಡಿದರು. ಇದೆ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ,ಕನ್ನಡ ನಾಡು ನುಡಿಯ ಬಗ್ಗೆ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ. ಎಂ.ಸಿ ಉಪಾಧ್ಯಕ್ಷೆ, ಭಾಗ್ಯ ,ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿರೂಪಾಕ್ಷ ಸದಸ್ಯರಾದ ಪೃಥ್ವಿ,ಎಸ್. ಡಿ.ಎಂ.ಸಿ .ಸದಸ್ಯರಾದ ರಾಣಿ, ಚೈತನ್ಯ ,ಅಮೃತ , ಸತ್ಯ ಕುಮಾರ್ ಹಾಗೂ ಸಹ ಶಿಕ್ಷಕಿ ಕನ್ಯಾಕುಮಾರಿ ಮುಂತಾದವರು ಉಪಸ್ಥಿತರಿದ್ದು ಕನ್ನಡ ರಾಜ್ಯೋತ್ಸವನ್ನು ವೈಭವಯುತವಾಗಿ ಆಚರಿಸಲಾಯಿತು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
