ತಿಪಟೂರು: ನಗರದ ಹಾಸನ ಸರ್ಕಲ್, ಭಾಸ್ಕರ ಪತ್ರಿಕೆ ಕಚೇರಿಯ ಬಳಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಾಂಬೆಗೆ ಪೂಜೆ ಸಲ್ಲಿಸಿ, ಕನ್ನಡ ದೀಪ ಬೆಳಗಿಸಿ, ಪುಷ್ಪ ನಮನ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಕಲ್ಪತರು ವಿದ್ಯಾ ಸಂಸ್ಥೆಯಲ್ಲಿ ಸುಮಾರು 36 ವರ್ಷಗಳಿಂದ ಡಿ ಗ್ರೂಪ್ ನೌಕರರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಾದಿಹಳ್ಳಿ ಕುಮಾರ್ ರವರಿಗೆ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ (ರಿ,) ತಿಪಟೂರು ಘಟಕ ವತಿಯಿಂದ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು ಹಾಗೂ ಕೆರಾ ಸಂಘದ ಗೌರವಾಧ್ಯಕ್ಷರು ಡಾ. ಭಾಸ್ಕರ್, ಅಧ್ಯಕ್ಷರು ಗಣೇಶ ಎಸ್, ಉಪಾಧ್ಯಕ್ಷರು ಶಂಕರಪ್ಪ ಪಿ (ರೈತ ಕವಿ), ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು, ಖಜಾಂಚಿ ಶುಭ ವಿಶ್ವಕರ್ಮ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಮಂಜಣ್ಣ, ಎಲ್ಐಸಿ ನಿವೃತ್ತ ಅಧಿಕಾರಿ ಜಯದೇವಪ್ಪ, ತಾಲೂಕಿನ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು
