ಡಾಕ್ಟರ್ ರಕ್ಷಿತ್ ಗೌಡ ರವರು 39ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಶಾರದಾ ದೇವಿ ಚಾರಿಟಬಲ್ ಟ್ರಸ್ಟ್ ,(ನಮ್ಮ ಹಿರಿಯರ ಮನೆ) ವೃದ್ಧಾಶ್ರಮದಲ್ಲಿ ನಮ್ಮೆಲ್ಲ ಹಿರಿಯರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿ, ಹಿರಿಯರ ಸೇವೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ವತಿಯಿಂದ ಹಾಗೂ ತರಕಾರಿ ಗಂಗಾಧರ ಸ್ನೇಹದ ವೃಂದದ ವತಿಯಿಂದ ಡಾಕ್ಟರ್ ರಕ್ಷಿತ್ ಗೌಡರಿಗೆ ಜನುಮದಿನದ ಪ್ರಯುಕ್ತ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಒಳಗೆರೇ ಹಳ್ಳಿ ರಾಮಣ್ಣ, ಟ್ರಸ್ಟಿನ ಸದಸ್ಯ ತರಕಾರಿ ಗಂಗಾಧರ್, ನಗರಸಭಾ ಸದಸ್ಯರಾದ ಡಾ. ಓಹಿಲಾ ಗಂಗಾಧರ್, ಕೋಟೆ ಪರಿಸರ ಪ್ರೇಮಿ ಶಿವಣ್ಣ, ಹಾಗೂ ಹಿರಿಯರ ಮನೆಯ ಎಲ್ಲ ಹಿರಿಯರು ಡಾಕ್ಟರ್ ರಕ್ಷಿತ್ ಗೌಡ ಅವರಿಗೆ ಅಭಿನಂದಿಸಿದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
