ತಿಪಟೂರು: ನನ್ನ ಮೇಲೆ ಜಾತಿಯತೆ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ. ಒಂದು ವೇಳೆ ಆರೋಪ ಸಾಬಿತುಪಡಿಸಿದರೆ ಅಧ್ಯಕ್ಷ ಸ್ಥಾನಕ್ಕೆ ತಕ್ಷಣ ರಾಜಿನಾಮೆ ನೀಡಲು ಸಿದ್ಧನಿದ್ದೇನೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಸವರಾಜಪ್ಪ ಎಂ ಸ್ಪಷ್ಟಪಡಿಸಿದರು. ಭಾಸ್ಕರ ಪತ್ರಿಕೆಯೊಂದಿಗೆಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷನಾಗಿ ಹಲವಾರು ಕನ್ನಡ ಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಈ ಕಾರ್ಯಗಳನ್ನು ಸಹಿಸದೆ ನನ್ನ ಮೇಲೆ ಆರೋಪ ಮಾಡುತ್ತಿರುವುದರಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಕಸಾಪ ಪದಾಧಿಕಾರಿಗಳು, ಪತ್ರಕರ್ತರು ಸೇರಿದಂತೆ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡಪರ ಕೆಲಸಗಳನ್ನು ಮಾಡುತ್ತಿದ್ದೇನೆ. ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿ ಎಂಬಂತೆ ಕೆಲವರು ಈ ಇಲ್ಲಸಲ್ಲದ ಆರೋಪ ಮಾಡಿ ನನ್ನ ಮೇಲೆ ಗುಬೆ ಕುರಿಸುವ ಪ್ರಯತ್ನ ಮಾಡುತಿದ್ದಾರೆ. ಇದೆಕ್ಕೆಲ್ಲ ಕಾಲವೇ ಉತ್ತರಿಸಲಿದೆ ಎಂದರು. ಇತ್ತೀಚೆಗೆ ತಾಲೂಕಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದೇವೆ. ಆದರೆ ಕೆಲವರು ಪ್ರತಿಷ್ಠೆಗಾಗಿ ಪತ್ರಕರ್ತರ ಸೋಗಿನಲ್ಲಿ ನನ್ನನ್ನು ಹಿಯಾಳಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಯಾವುದಕ್ಕೂ ಬಗ್ಗುವನಲ್ಲ. ಒಂದು ವೇಳೆ ಆರೋಪ ಮಾಡುವವರು ಪ್ರತ್ಯೇಕ್ಷವಾಗಿ ಬಂದು ಸಾಬೀತು ಪಡೆಸಿದರೆ, ನಾನು ಸಾರ್ವಜನಿಕ ಜೀವನದಲ್ಲೆ ಇರುವುದಿಲ್ಲ. ಸುಖಾ ಸುಮ್ಮನೆ ನನ್ನ ಮಾನ ಹರಾಜು ಹಾಕುವ ಕೆಲಸ ಮಾಡಿದರೆ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದರು.

