ತಿಪಟೂರು: ನಗರಕ್ಕೆ ಆಗಮಿಸಿದ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾ ಕೂಟದ ಅಂಗವಾಗಿ ಗುರುವಾರದಂದು "ಕ್ರೀಡಾಜ್ಯೋತಿ"ಯು ಗ್ರಾಮದೇವತೆ ಕೆಂಪಮ್ಮ ದೇವಾಲಯ ತಲುಪಿತು, ಕನ್ನಡಾಂಬೆ ಮತ್ತು ಜ್ಯೋತಿಗೆ ಪೂಜೆ ಸಲ್ಲಿಸಿ ಶಾಸಕ ಕೆ. ಷಡಕ್ಷರಿ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಪವನ್ ಕುಮಾರ್, ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ತಾಲೂಕು ನಿರ್ವಾಹಣಾಧಿಕಾರಿ ಸುದರ್ಶನ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪ್ರಶಾಂತ್ ಕರಿಕೆರೆ, ಜಿಲ್ಲಾ ನಿರ್ದೇಶಕ ಮಂಜುನಾಥ್ ಹಾಲ್ಕುರಿಕೆ, ಪದಾಧಿಕಾರಿಗಳಾದ ಮೂರ್ತಿ, ದಯಾನಂದ್ ಕುಮಾರ್, ಕುಮಾರಸ್ವಾಮಿ, ಬಿ.ಟಿ ಕುಮಾರ್, ಮನೋಹರ್, ಸುಪ್ರಿತ್, ಪ್ರಕಾಶ್, ಸೋಮನಾಥ್, ಕಿರಣ್ ಕುಮಾರ್, ಕಲ್ಲೇಶ್, ರವೀಂದ್ರ ಕುಮಾರ್, ನಾಗರಾಜ್, ರಂಗನಾಥ್, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾದ ಶ್ರೀಮತಿ ಶಾರದಮ್ಮ, ಶ್ರೀಮತಿ ಶುಭ ವಿಶ್ವಕರ್ಮ ಮತ್ತು ಶ್ರೀಯುತ ಬಸವರಾಜು ಇದ್ದರು. ನಗರದ ಪೈ ಸರ್ಕಲ್ ವರೆಗೆ ಕ್ರೀಡಾಜ್ಯೋತಿಯನ್ನು ಬಿಳ್ಕೊಡಲಾಯಿತು.


