ಆನೆಕಲ್: ಹೌದು ತಾಲೂಕಿನ ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿನ ವಡ್ಡರಪಾಳಯ್ಯ ಕೆನರಾಬ್ಯಾಂಕ್ ಎಟಿಮ್‌ನ್ನು ಸೋಮವಾರ ಮುಂಜಾನೆ 3. 30ರ ಸುಮಾರಿಗೆ ಸರಕು ಸಾಗಣೆ ವಾಹನದಲ್ಲಿ ಬಂದಂತಹ ಕಳ್ಳರು ಎಟಿಎಂ ಹಣ ಎಗರಿಸಲು ಪ್ರಯತ್ನಿಸಿ ಕೊನೆಗೆ ಎಟಿಎಂ ಯಂತ್ರವನ್ನೇ ಹೊತ್ತುಕೊಂಡು ಹೋದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಾಕ್ಸಾಬ್ಲೇಡ್ನಿಂದ ಯಂತ್ರ ಕೊರೆಯುವ ಪ್ರಯತ್ನದಲ್ಲಿ ಕಳ್ಳರು ವಿಫಲರಾಗಿದ್ದಾರೆ,ಬೆಳಿಗ್ಗೆ ಜನರ ಚಲನವಲನ ನೋಡಿ ಮಂಚನಹಳ್ಳಿ ನೀಲಗಿರಿ ತೋಪಿನಲ್ಲಿ ಯುಂತ್ರವನ್ನು ಎಸೆದು ಹೋಗಿದ್ದಾರೆ, ನಂತರ ಅದನ್ನು ಪತ್ತೆ ಮಾಡಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆ ಎಟಿಎಂ ನಲ್ಲಿ 10ಲಕ್ಷ ಹಣ ಎಂಬುದು ತಿಳಿದುಬಂದಿದೆ.

.png)
