ಆರ್‌ ಟಿ ಓ ಕಛೇರಿಗಳ ಮೇಲೆ ಲೋಕಾಯುಕ್ತ ದಾಳಿ

ಭಾಸ್ಕರ ಪತ್ರಿಕೆ
0


ತುಮಕೂರು: ಎಜೆಂಟರ ಹಾವಳಿ ಮಧುಗಿರಿ- ತಿಪಟೂರು ಸಾರಿಗೆ ಇಲಾಖೆಯಲ್ಲಿ ಹೆಚ್ಚಿರುವ ಬಗ್ಗೆ  ಸಾರ್ವಜನಿಕರಿಂದ  ಆರೋಪಗಳು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಮೂರು ಕಡೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ, ತಪಾಸಣೆ ನಡೆಸಿದ್ದಾರೆ. ತುಮಕೂರು ಲೋಕಾಯುಕ್ತರ ತಂಡ ಆರ್.ಟಿ.ಒ ಕಚೇರಿ ಮೇಲೆ ದಾಳಿ ನಡೆಸಿ, ಕಚೇರಿಯಲ್ಲಿದ್ದವರಿಂದ ಮಾಹಿತಿ ಸಂಗ್ರಹಿಸುವುದರೊಂದಿಗೆ ಅಧಿಕಾರಿಗಳ ಮೇಲೆ ಸಾರ್ವಜನಿಕರು ದೂರು ಹೇಳಿದರೆ ಎಫ್ ಐಆರ್ ದಾಖಲಿಸಲು ಮುಂದಾಗಿದೆ, ಕಚೇರಿ ಒಳಗೆ ಜನಸಾಮಾನ್ಯರೊಂದಿಗೆ ಮಧ್ಯವರ್ತಿಗಳ ತಪಾಸಣೆ ಮಾಡುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಜನಸಾಮಾನ್ಯರ ಕೆಲಸಗಳನ್ನು ತಡ ಮಾಡಲು ಕಾರಣ ಏನು? ಎನ್ನುವುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ, ಆರ್.ಟಿ.ಓ ಕಛೇರಿಯಲ್ಲಿ ತಪಾಸಣೆ ನಡೆಸುತಿದ್ದು ಸಾಕಷ್ಟು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*