ವೀರಭದ್ರಪ್ಪ ಕವಲೂರಗೆ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ

ಭಾಸ್ಕರ ಪತ್ರಿಕೆ
0

 


ಗದಗ: ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಕೊಡಮಾಡುವ 2022ನೇ ಸಾಲಿನ ಗೌರವ ಪ್ರಶಸ್ತಿಗೆ ಐತಿಹಾಸಿಕ ಲಕ್ಕುಂಡಿ ಗ್ರಾಮದ ಶಿಲ್ಪಿ ವೀರಭದ್ರಪ್ಪ ಕಾಳಪ್ಪ ಕವಲೂರ ಆಯ್ಕೆಯಾಗಿದ್ದಾರೆ. ಕಲ್ಲು ಕಟ್ಟಿಗೆ, ಮಣ್ಣು ಹಾಗೂ ಪಂಚಲೋಹದ ವಿಗ್ರಹಗಳ ತಯಾರಿಕೆಯಲ್ಲಿ ನೈಪುಣ್ಯತೆ ಹೊಂದಿರುವ 81 ವರ್ಷದ ಇಳಿವಯಸ್ಸಿನಲ್ಲೂ ವೀರಭದ್ರಪ್ಪ ಕವಲೂರ ಅವರು ವಂಶಪಾರಂಪರಿಕ ಸಾಂಪ್ರದಾಯಿಕ ಕಲೆಯನ್ನು ಇಂದಿನ ಪೀಳಿಗೆ ಕೂಡ ತರಬೇತಿ ನೀಡುತ್ತ ಬಂದಿದ್ದಾರೆ. ಐತಿಹಾಸಿಕ ಸ್ಥಳವಾದ ಲಕ್ಕುಂಡಿ ಗ್ರಾಮದಲ್ಲಿ 1943ರಲ್ಲಿ ಜನಿಸಿದ ವೀರಭದ್ರಪ್ಪ ಕವಲೂರ ಅವರು 7ನೇ ತರಗತಿಯವರೆಗೆ ವ್ಯಾಸಂಗ ಮಾಡಿ ಶಿಲ್ಪ ಕಲೆಗಳ ತಯಾರಿಕೆಗಳಲ್ಲಿ ತೊಡಗಿಸಿಕೊಂಡು ಕರ್ನಾಟಕ ಹಾಗೂ ಹೊರ ರಾಜ್ಯಗಳಿಗೆ ವಿಗ್ರಹಗಳನ್ನು ನೀಡಿದ ಹಿರಿಮೆ ಇವರದಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 7 ಅಡಿ ಎತ್ತರದ ವೆಂಕಟೇಶ್ವರ ಮೂರ್ತಿ, ಮಹಾರಾಷ್ಟ್ರದಲ್ಲಿ ವೀರಭದ್ರೇಶ್ವರ ಮೂರ್ತಿ, 9 ಅಡಿ ಎತ್ತರದ ಮಾರುತಿ ವಿಗ್ರಹ ಹಾಗೂ ಜಿಲ್ಲಾದ್ಯಂತ ವಿವಿಧ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿರುವ ವಿವಿಧ ಕಲ್ಲಿನ ಮೂರ್ತಿಗಳನ್ನು ಹಾಗೂ ಕಲ್ಲು, ಕಟ್ಟಿಗೆ, ಮಣ್ಣು, ಪಂಚಲೋಹ ಮತ್ತು ಸಿಮೆಂಟ್, ಪಿಒಪಿ ಎಲ್ಲ ಮಾದರಿಯಲ್ಲೂ ಸಾಂಪ್ರದಾಯಿಕ ಕಲಾಕೃತಿ ಗಳನ್ನು ರಚಿಸಿಕೊಟ್ಟಿರುವುದು ಅವರ ಹೆಗ್ಗಳಿಕೆಯಾಗಿದೆ. ವೈಯಕ್ತಿಕ ಸಂಘ ಸಂಸ್ಥೆಗಳಿಂದ 'ಶ್ರೀ ರತ್ನಾ' ಸಾಧಕ ಪ್ರಶಸ್ತಿ, 'ಶಿಲ್ಪ ಶ್ರೀ' ಸೇರಿ ಇತರೆ ಪ್ರಶಸ್ತಿಗಳು ಒಲಿದುಬಂದಿವೆ. 81 ವರ್ಷ ಇಳಿವಯಸ್ಸಿನಲ್ಲೂ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಲ್ಪಕಲೆ ತರಬೇತಿ ನೀಡುತ್ತಿದ್ದು, ಅವರಲ್ಲಿ ತರಬೇತಿ ಹೊಂದಿದವರು ಸ್ವಂತ ಕೆಲಸ ಮಾಡುತ್ತಿದ್ದಾರೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*