ಸವದತ್ತಿ: ಹಾಡು ಹಗಲೇ ಯುವಕನ ಹತ್ಯೆ, ಮುರಗೋಡ ಗ್ರಾಮದಲ್ಲಿ ಸೋಹೇಲ್ ಅಹಮ್ಮದ್ ಕಿತ್ತೂರು (17) ಎಂಬ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ, ಸೋಹೇಲ್ ಅಹಮ್ಮದ್ ಕಿತ್ತೂರು ಎಗ್‌ರೈಸ್ ಅಂಗಡಿ ನಡೆಸುತಿದ್ದು, ಹಿಂದೆ ಇವನಿಗೆ ಯಾರೋ ಜೀವ ಬೆದರಿಕೆ ಹಾಕಿದ್ದರು, ಈ ಬೆದರಿಕೆ ಬಗ್ಗೆ ಠಾಣೆಯಲ್ಲಿ ದೂರು ಕೊಡಲಿಲ್ಲ ಎಂಬುದು ಜನರ ಮಾತಾಗಿದೆ, ಮುರಗೋಡ ಗ್ರಾಮದ ಹೊರವಲಯದಲ್ಲಿ ಯುವಕನನ್ನು ಮನಬಂದಂತೆ ಇರಿದು ಕೊಂದಿದ್ದಾರೆ, ಇದು ಐವರ ಕೃತ್ಯವೆಂದು ಹೇಳಲಾಗುತ್ತಿದ್ದು ಸ್ಥಳಕ್ಕೆ ಮುರಗೋಡ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದಾರೆ.
