ತಿಪಟೂರು: ಪ್ರತಿಯೊಂದು ಕಾನೂನನ್ನು ಪಾಲಿಸುವದರ ಜೊತೆಗೆ ಗೌರವಿಸಬೇಕು ಕೊನೆಯವರೆಗೂ ಕೋಟು ಧರಿಸಿವ ಏಕೈಕ ವೃತ್ತಿ ವಕೀಲ ವೃತ್ತಿ ಈ ವೃತ್ತಿಯಲ್ಲಿ ಹೆಸರುಮಾಡಿದಾಗ ಹಣವೂ ತಾನಾಗಿಯೇ ಬರುತ್ತದೆ ಎಂದು ತಿಪಟೂರು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಬಿ ಎಸ್ ಅಜಯ್ ರವರು ತಾಲ್ಲೂಕಿನ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜುವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ವಹಿಸಿ ಮಾತನಾಡಿದರು. ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಶ್ರೀ ಬಿ. ಮಲ್ಲಿಕಾರ್ಜುನಯ್ಯ ಮಾತನಾಡಿ ಶಿಕ್ಷಣವನ್ನು ನಾವು ಕಲಿಯುತ್ತಿದ್ದೇವೆ ಆದರೆ ಸಾಮಾಜಿಕ ಸಮಸ್ಯೆಗಳು ಎದುರಾದಾಗ ಮರೆಮಾಚುತಿದ್ದೇವೆ ನಮ್ಮ ಸಮಾಜವನ್ನು ನಾವು ಗಮನಿಸಬೇಕು ಆಗ ನಮಗೆ ಸಂವಿಧಾನದ ಅನ್ವಯ ಅರಿವಾಗುತ್ತದೆ ಸಂವಿಧಾನದ ಪಿಠೀಕೆಯಂತೆ ಬದುಕೋಣ ಎಂದರು, ಮತ್ತೊರ್ವ ಪ್ಯಾನೆಲ್ ವಕೀಲರಾದ ಬಿ. ಪಿ ರಾಜೇಂದ್ರ ಪ್ರಸಾದ್ ಮಾತನಾಡಿ ದೇಶದ ಯಾವುದೇ ಉನ್ನತ ಮಟ್ಟದ ಹುದ್ದೆ ಏರಲು ಸಂವಿಧಾನ ಅವಕಾಶ ಕಲ್ಪಿಸಿದೆ ಸಂವಿಧಾನ ಮಾರ್ಪಾಡು ಮಾಡಲಷ್ಟೇ ಅವಕಾಶವಿದೆ ಆದರೆ ಮೂಲ ಸಂರಚನೆ ಬದಲಸಿಲು ಅವಕಾಶವಿಲ್ಲ ಅಂದಿನಿಂದ ಇಂದಿನವರೆಗೂ ತನ್ನ ಬಾಹುಗಳಿಂದ ನಮ್ಮನ್ನು ಕಾಪಾಡುತ್ತಿದೆ ಸಂವಿಧಾನದ ಕಾರ್ಯ ವೈಖರಿ ನಿಂತ ನೀರಲ್ಲ ಸದಾ ಹರಿಯುವ ನೀರು ಎಂದರು. ಮತ್ತೋರ್ವ ಪ್ಯಾನಲ್ ವಕೀಲರಾದ ಎಂ .ಸಿ. ನಟರಾಜ್ ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ಅವರ ದೂರದೃಷ್ಟಿಗಳನ್ನು ಇಂದು ಮತದಾರರು ಅನರ್ಹರಿಗೆ ಕಾನೂನು ತಿದ್ದುಪಡಿ ಮಾಡುವ ಅವಕಾಶ ಕಲ್ಪಿಸುತ್ತಿರುವುದು ದುರದೃಷ್ಟಕರ ಮಹಿಳಾ ಶೋಷಣೆಗಳು ಎಂದು ಹೇಳಿ ಹೇಳಿ ಶೋಷಣೆಗಳು ಹೆಚ್ಚಾಗುತ್ತಿದೆ ಶೋಷಣೆಯನ್ನು ಕುರಿತು ಆಚರಿಸುವ ಬದಲು ನಿರ್ಮೂಲನೆ ಮಾಡಬೇಕು ಇಲ್ಲದಿದ್ದರೆ ಪರೋಕ್ಷವಾಗಿ ಪ್ರೇರಣೆ ನೀಡಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು, ಇಂದು ವಕೀಲ ವೃತ್ತಿಗೆ ಬೇಡಿಕೆ ಹೆಚ್ಚುತ್ತಿದೆ ಸಾಮಾಜಿಕವಾಗಿ ಮತ್ತು ನೈತಿಕವಾಗಿ ಬದಲಾವಣೆ ಮಾಡುವ ಪ್ರೇರಣೆಯಿಂದ ಇಂದಿನ ಯುವ ಪೀಳಿಗೆ ಕಾನೂನು ಪದವಿಯನ್ನು ಆಯ್ಕೆ ಮಾಡುತ್ತಿದ್ದಾರೆ ಅದಕ್ಕೆ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಮುಕ್ತವಾದ ಅವಕಾಶಗಳು ಇವೆ, ಕಾನೂನು ಪದವಿಯನ್ನು ಪಡೆದ ಬಳಿಕ ಕಾಯುವ ಅಗತ್ಯವಿಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಮೂಲಕ ತ್ವರಿತವಾಗಿ ನ್ಯಾಯಾಧೀಶರಾಗುವ ಅವಕಾಶವಿದೆ ಹಾಗೂ ಖಾಸಗಿ ಕಂಪನಿಗಳಲ್ಲಿ ಕಾನೂನು ಪದವಿಯ ಉದ್ಯೋಗಕ್ಕೆ ವಿಫುಲವಾದ ಬೇಡಿಕೆ ಇದೆ ಎಂದು ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಮಾಹಿತಿ ನೀಡಿದರು. ಸಂವಿಧಾನದ ಪ್ರಸ್ತಾವನೆಯನ್ನು ಸಂಕಲ್ಪ ಮಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ತಿಪಟೂರು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಬಿ ಎಸ್ ಅಜಯ್, ಕಾರ್ಯದರ್ಶಿಗಳಾದ ಶ್ರೀ ಬಿ ಮಲ್ಲಿಕಾರ್ಜುನಯ್ಯ, ಪ್ಯಾನಲ್ ವಕೀಲರಾದ ಬಿ ಪಿ ರಾಜೇಂದ್ರ ಪ್ರಸಾದ್, ಪ್ಯಾನಲ್ ವಕೀಲರಾದ ಎಂ ಸಿ ನಟರಾಜ್, ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನ ಪ್ರಾಂಶುಪಾಲರಾದ ವಿನಿತಾ ಪಿ ಕೆ , ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು ಮತ್ತು ಕಾಲೇಜು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
