ಲಂಚ ಪಡೆಯುತ್ತಿದ್ದ ಇಡಿ ಅಧಿಕಾರಿ ಕಚೇರಿಗೆ ಸಿಬಿಐ ದಾಳಿ: 1 ಕೋಟಿ ನಗದು ವಶ

ಭಾಸ್ಕರ ಪತ್ರಿಕೆ
0


ಶಿಮ್ಲಾದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಿಬಿಐ ಶುಕ್ರವಾರ ಶೋಧ ನಡೆಸಿದೆ. ಅಲ್ಲದೇ 1.14 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ರಾಜಧಾನಿಯಲ್ಲಿರುವ ಇಡಿ ಕಚೇರಿ ಮತ್ತು ಅವರ ನಿವಾಸದಲ್ಲಿ ಸಿಬಿಐಯು ಆರೋಪಿ ಅಧಿಕಾರಿಯ ವಿರುದ್ಧ ಶೋಧ ನಡೆಸಿ ಹಣವನ್ನು ವಶಪಡಿಸಿಕೊಂಡಿದೆ.

ಆರೋಪಿಯು ಇಡಿಯ ಸಹಾಯಕ ನಿರ್ದೇಶಕ ಶ್ರೇಣಿಯ ಅಧಿಕಾರಿಯಾಗಿದ್ದು, ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಅವನ ಸಹೋದರನನ್ನು ಸಿಬಿಐ ಬಂಧಿಸಿದೆ ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೇಡಿಕೆಯಂತೆ ಲಂಚ ನೀಡದಿದ್ದರೆ ಬಂಧಿಸುವುದಾಗಿ ಆರೋಪಿ ಅಧಿಕಾರಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ ದೂರಿನ ಮೇರೆಗೆ ಸಿಬಿಐ ಈ ದಾಳಿ ಕೈಗೊಂಡಿದೆ.

ಸಿಬಿಐ ದಾಳಿಯ ನಂತರ ಹಣಕಾಸು ತನಿಖಾ ಸಂಸ್ಥೆ ತನ್ನ ಶಿಮ್ಲಾ ಶಾಖೆಯಿಂದ ಕನಿಷ್ಠ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇದರಲ್ಲಿ ಸಹಾಯಕ ನಿರ್ದೇಶಕರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ಮತ್ತು ತಲೆಮರೆಸಿಕೊಂಡಿರುವ ಇಡಿ ಅಧಿಕಾರಿಯನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*