ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ಬೆಸ್ಕಾಂ ನೌಕರ ಸ್ಥಳದಲ್ಲೇ‌ ಸಾವು

ಭಾಸ್ಕರ ಪತ್ರಿಕೆ
0


ಕುಣಿಗಲ್: ಚಾಲಕನ ನಿಯಂತ್ರಣ ತಪ್ಪಿ.ಕಾರು ಮರಕ್ಕೆ ಡಿಕ್ಕಿ ಹೊಡೆದು ಬಳಿಕ ಪಲ್ಟಿಯಾಗಿ ಬೆಸ್ಕಾಂ ನೌಕರರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆ ತಾಲೂಕಿನ ಕುಣಿಗಲ್ ತಾಲ್ಲೋಕಿನ ದೊಡ್ಡಮಾವತ್ತೂರು ಬಳಿ ಶನಿವಾರ ಸಂಬವಿಸಿದೆ, ತುಮಕೂರು ಜಿಲ್ಲೆ ತಿಪಟೂರು ನಗರ ಸ್ಟೆಲ್ಲಾ ಮೇರಿಸ್ ಸ್ಕೂಲ್ ವಿದ್ಯಾನಗರ ವಾಸಿ ಸಿ.ಎನ್ ಹರೀಶ್ (37) ಮೃತ ಕಾರು ಚಾಲಕ, ಬೆಸ್ಕಾಂ ನೌಕರ ಹರೀಶ್ ಕಾರು ಚಾಲನೆ ಮಾಡಿಕೋಂಡು ತಿಪಟೂರಿನಿಂದ ಕುಣಿಗಲ್ ಮಾರ್ಗವಾಗಿ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ 

ಚಾಲಕನ ನಿಯಂತ್ರಣ ತಪ್ಪಿ ಕಾರು, ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ನಂತರ ತೆಂಗಿನ ಮರಕ್ಕೆ ರಸಭವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ಚಾಲಕ ಹರೀಶ್ ಸ್ಥಳದಲ್ಲೇ‌ ಮೃತಪಟ್ಟಿದ್ದಾನೆ ಘಟನೆ ಸ್ಥಳಕ್ಕೆ ಅಮೃತ್ತೂರು ವೃತ್ತ ನಿರೀಕ್ಷಕ‌ ಮಾದ್ಯಾನಾಯಕ್ ಬೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*