ತಿಪಟೂರು: ಡಿಸೆಂಬರ್ 25 2024 ನಮ್ಮ ದೇಶದ ಮಾಜಿ ಪ್ರಧಾನಿಗಳಾದಂತಹ ಶ್ರೀಯುತ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದ ನಿಮಿತ್ತ ಉತ್ತಮ ಆಡಳಿತ ದಿನ ವನ್ನು ನಗರದ ಹಾಸನ ವೃತ್ತದ ಭಾಸ್ಕರ್ ಪತ್ರಿಕೆ ಕಚೇರಿಯಲ್ಲಿ ಆಚರಿಸಲಾಯಿತು.
ಅಟಲ್ ಬಿಹಾರಿ ವಾಜಪೇಯಿ ಮಾಡಿದಂತಹ ಆಡಳಿತ ನಮಗೆಲ್ಲರಿಗೂ ಮಾದರಿಯಾದಂತಹ ಆಡಳಿತ ಆದ್ದರಿಂದ ಈ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸುತ್ತಾರೆ ಹಾಗೂ ವಾಜಪೇಯಿ ಅವರು ನಮ್ಮೊಂದಿಗೆ ಇದ್ದಂತಹ ಬದಲಾವಣೆಗಳು ಉತ್ತಮ ಆಡಳಿತ ಹಾಗೂ ದೇಶದ ಅಭಿವೃದ್ಧಿ ಕಾರ್ಯಗಳು ಇವೆಲ್ಲ ಶ್ಲಾಘನೀಯ ಸಂಗತಿಗಳು. ಈ ಕಾರ್ಯಕ್ರಮದಲ್ಲಿ ನಗರದ ಸ್ವಯಂಸೇವಕ ಭೂಷಣ್ ಮಾತನಾಡಿ ಸರ್ವ ವ್ಯಾಪಿ ಸರ್ವ ಸ್ಪರ್ಷಿ ಎಂಬ ವಿಷಯದ ಕುರಿತು ವಾಜಪೇಯಿ ಅವರ ಕುರಿತು ಮಾತನಾಡಿದರು ಹಾಗೂ ಭಾಸ್ಕರ್ ಪತ್ರಿಕೆ ಸಂಪಾದಕರಾದ ಶ್ರೀಯುತ ಭಾಸ್ಕರ್ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತವನ್ನು ಈಗಿನ ಯುವ ಕಾರ್ಯಕರ್ತರು ಮಾರ್ಗದರ್ಶನವಾಗಿ ತೆಗೆದುಕೊಂಡು ಆಡಳಿತವನ್ನು ನಡೆಸಬೇಕು ಎಂದು ಹೇಳಿದರು. ಇದೇ ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಅರುಣ್ ಹಾಗೂ ಸ್ವಯಂ ಸೇವಕರು ಭಾಗವಹಿಸಿದ್ದರು.

