ಮಣಿಪುರದಲ್ಲಿ ಕುಕಿ ಮತ್ತು ಮೈತೆಯಿಗಳ ನಡುವಿನ ಸಂಘರ್ಷಕ್ಕೆ ವರ್ಷ ಕಳೆದಿರುವಂತೆಯೇ ಇದೀಗ ಅಸ್ಸಾಮಿನ ಪೊಲೀಸ್ ಅಕಾಡೆಮಿಯಲ್ಲಿ ಮೈತೆಯಿಗಳು ಮತ್ತು ಕುಕಿ ಸಮುದಾಯದ 2000ದಷ್ಟು ಯುವಕರು ಜೊತೆಯಾಗಿ 44 ವಾರಗಳನ್ನು ಕಳೆದಿದ್ದಾರೆ. ಪೊಲೀಸ್ ರಿಕ್ರೂಟ್ಮೆಂಟ್ ನ ಬಳಿಕ ತರಬೇತಿಗಾಗಿ ಇವರೆಲ್ಲರೂ ಇಲ್ಲಿ ಸೇರಿದ್ದಾರೆ. ಇವರೆಲ್ಲ ಇಲ್ಲಿ ಜೊತೆಯಾಗಿ ಊಟ ಮಾಡಿದ್ದಾರೆ, ಮಲಗಿದ್ದಾರೆ ಮಾತು ಆಟ ಆಡಿದ್ದಾರೆ. ಆದರೆ ನಮ್ಮ ರಾಜ್ಯಕ್ಕೆ ನಾವು ಮರಳಿದರೆ ಹೀಗೆ ಜೊತೆಯಾಗಿ ಬದುಕಲು ಸಾಧ್ಯವಾದೀತು ಎಂದು ಹೇಳಲಾಗದು ಎಂದು ಈ ಯುವಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಣಿಪುರ ಹಿಂಸಾಚಾರವು 20ನೇ ತಿಂಗಳಿಗೆ ಕಾಲಿಟ್ಟಿದೆ ಮತ್ತು ಈವರೆಗೆ 261 ಮಂದಿ ಹತ್ಯೆಗೀಡಾಗಿದ್ದಾರೆ. 60,000 ಕ್ಕಿಂತಲೂ ಹೆಚ್ಚು ಮಂದಿ ನಿರ್ವಸಿತರಾಗಿದ್ದಾರೆ.
ಈ 2000 ಮಂದಿಯಲ್ಲಿ 62 ಶೇಕಡ ಮೈತೆಯಿಗಳಾದರೆ 12 ಶೇಕಡ ಕುಕಿ ಗಳಿದ್ದಾರೆ. ಉಳಿದ 26 ಶೇಕಡಾ ಮಂದಿಯಲ್ಲಿ ನಾಗ ಬುಡಕಟ್ಟು ಮತ್ತು ಇತರ ಬುಡಕಟ್ಟುಗಳಿಗೆ ಸೇರಿದವರಿದ್ದಾರೆ.
ತರಬೇತಿಯಲ್ಲಿ ಈ ಯುವಕರೆಲ್ಲ ಜೊತೆಯಾಗಿಯೇ ಇದ್ದರೂ ಮಣಿಪುರಕ್ಕೆ ಮರಳಿದರೆ ಮತ್ತೆ ವೈರತ್ವ ಪ್ರಾರಂಭವಾಗಬಹುದು ಅನ್ನುವ ಆತಂಕ ಈ ಯುವಕರಲ್ಲಿ ಇದೆ.

