ಹುಬ್ಬಳ್ಳಿ: ಉಣಕಲ್ ನ ಅಚ್ಚವ್ವ ಕಾಲನಿಯ ಈಶ್ವರ ದೇವಸ್ಥಾನದಲ್ಲಿ ರವಿವಾರ ರಾತ್ರಿ 1ಗಂಟೆ ಸಮಯದಲ್ಲಿ ಅವಘಡವೊಂದು ಸಂಭವಿಸಿದೆ, ರಾತ್ರಿ ಅಯ್ಯಪ್ಪ ಸ್ವಾಮಿ ಪೂಜೆಯನ್ನು ಮಾಡಿ ಮಲಗಿದ್ದ ಮಾಲಾಧಾರಿಗಳ ಪೈಕಿ ಓರ್ವ ಮಾಲಾದಾರಿಯ ಕಾಲು ನಿದ್ದೆಗಣ್ಣಿನಲ್ಲಿ ಸ್ಟೋವ್‌ಗೆ ತಾಕಿ ಗ್ಯಾಸ್ ಲೀಕ್ ಆಗಿದೆ, ಆ ದೇವಸ್ಥಾನದಲ್ಲಿ ದೀಪವಿದ್ದ ಕಾರಣ ಒಮ್ಮೆಲೇ ಬೆಂಕಿ ಹೊತ್ತಿಕೊಂಡಿದೆ.
ದೇವಸ್ಥಾನಕ್ಕೆ ಒಂದೇ ಬಾಗಿಲು ಹಾಗೂ ಕಿಟಕಿ ಇದ್ದಿದ್ದರಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಪಾರಾಗಲು ಕಷ್ಟಕರವಾಗಿದೆ, ಮೈಮೇಲೆ ಯಾವುದೇ ಯಾವುದೇ ರೀತಿಯ ಹೊದಿಕೆ ಬೇರೆ ಇಲ್ಲ ಹೀಗಾಗಿ ಬೆಂಕಿ ಕೆನ್ನಾಲಿಗೆ ಭಕ್ತರ ಮಾಲಾಧಾರಿಗಳ ಮೈ ಆವರಿಸಿದೆ,ಇದರ ಪರಿಣಾಮ 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ, ಕೂಡಲೇ ಸ್ಥಳೀಯರು ಗಾಯಗೊಂಡ 9 ಜನರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ, ಇದರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ, ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
