ತಿಪಟೂರು: ತಾಲ್ಲೂಕಿನ ಹೋನ್ನವಳ್ಳಿ ಹೋಬಳಿ ಹಾಲ್ಕುರಿಕೆ ಶ್ರೀ ಬಸವೇಶ್ವರ ಪಬ್ಲಿಕ್ ಶಾಲೆಯೊಂದರಲ್ಲಿ ಮಂಗಳವಾರ ಮಕ್ಕಳ ಸಂತೆ ಮೇಳ ಏರ್ಪಡಿಸಲಾಯಿತು ಮಕ್ಕಳು ತರಕಾರಿ ಬೇಕಾ ತರಕಾರಿ ತಾಜಾ ತರಕಾರಿ ಬನ್ನಿ ಸರ್ ಬನ್ನಿ ಸೋಪ್ಪು ಹಣ್ಣು ಹೂವು ಏನು ಬೇಕಾದರೂ ತಗೋಳಿ ಕಮ್ಮಿ ಬೆಲೆಗೆ ಕೊಡ್ತೀವಿ ಎಂದು ಮಾರಾಟ ಮಾಡಿದ ಚಿಣ್ಣರು ಮಕ್ಕಳಲ್ಲಿ ವ್ಯವಹಾರ ಜ್ಞಾನ ವೃದ್ಧಿಸುವ ಕೆಲಸ ಮಾಡಿದೆ ಶ್ರೀಬಸವೇಶ್ವರ ಪಬ್ಲಿಕ್ ಸ್ಕೂಲ್ ಈ ವೇಳೆ ಮಾತನಾಡಿದ ಮುಖ್ಯ ಶಿಕ್ಷಕಿ ಶಿಲ್ಪಾರವರು ವ್ಯವಹಾರ ಜ್ಞಾನ ವೃದ್ಧಿಸುವಲ್ಲಿ ಮಕ್ಕಳಲಿ ಕಲೆ ಸಾಹಿತ್ಯ ಕ್ರೀಡೆ ಹೆಚ್ಚು ಸಹಕಾರಿ. ವಸ್ತುಗಳ ಉತ್ತಮ ಗುಣಮಟ್ಟದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳ ಸಂತೆ ಮೇಳ ಏರ್ಪಡಿಸಲಾಗಿದೆ, ಎಂದರು.
ಪೋಷಕರದ ಉಷಾ ಮಾತನಾಡಿ. ನನ್ನ ಮಗಳು ಇಲ್ಲೇ ಯುಕೆಜಿ ವ್ಯಾಸಂಗ ಮಾಡುತ್ತಿದ್ದು ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ ಪಟ್ಟಣ ಮತ್ತು ಗ್ರಾಮೀಣ ಸೊಗಡನ್ನು ತಿಳಿಯಲು ಮಕ್ಕಳು ನಾಲ್ಕು ಗೋಡೆಯಿಂದ ಆಚೆ ಬರಬೇಕು ವ್ಯಾಸಂಗದ ಜೊತೆ ವ್ಯವಹಾರ ಜ್ಞಾನ ಅತಿ ಮುಖ್ಯ ಎಂದರು.
ಈ ಸಂದರ್ಭದಲ್ಲಿ. ಮುಖ್ಯ ಶಿಕ್ಷಕಿಯಾದ ಶಿಲ್ಪ. ಜ್ಯೋತಿ ಮೀರಾ, ಸುಜಾತ, ಸೌಜನ್ಯ ಕಾವ್ಯ, ಚಂದನ ಸೇರಿದಂತೆ ಪೋಷಕರು, ಶಾಲಾ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.

