ವಾರ್ಡ್ ನಂಬರ್ 15ರಲ್ಲಿ ಸಿದ್ಧಿವಿನಾಯಕ ಸಂಘದ ವತಿಯಿಂದ 76ನೇ ಗಣರಾಜ್ಯೋತ್ಸವ ಹಾಗೂ ನೂತನ ದಿನಚರಿ ಬಿಡುಗಡೆ ಸಮಾರಂಭ

ಭಾಸ್ಕರ ಪತ್ರಿಕೆ
0

ತಿಪಟೂರು: ಸಿದ್ಧಿ ವಿನಾಯಕ ಸಂಘದ ವತಿಯಿಂದ ಪುರಸಭೆ ವಾರ್ಡ್ ನಂಬರ್ 15ರಲ್ಲಿ ನಾಗರಿಕ ಹಿತ ರಕ್ಷಣಾ ವೇದಿಕೆಯಿಂದ 76ನೇ ಗಣರಾಜ್ಯೋತ್ಸವದ ಪ್ರಯುಕ್ತ ಸ್ವಚ್ಛತೆಯನ್ನು ಮಾಡಿ 2025ನೇ ನೂತನ ದಿನಾಚರಣೆಯನ್ನು ಬಿಡುಗಡೆ ಮಾಡಲಾಯಿತು. 
ಸಮಾರಂಭದ ಉದ್ಘಾಟನೆಯನ್ನು ಶಾಸಕ ಕೆ ಷಡಕ್ಷರಿ ಉದ್ಘಾಟಿಸಿ ಮಾತನಾಡಿದರು, ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ನೊಣವಿನಕೆರೆಯಿಂದ ಒದಗಿಸುತ್ತೇನೆ ಎಂದು ಭರವಸೆ ನೀಡಿದರು, ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಶ್ರೀಮತಿ ಯಮುನಾ ಧರಣೇಶ್, 15 ನೇ ವಾರ್ಡಿನ ನಗರಸಭೆ ಸದಸ್ಯೆ ವಿನುತ ತಿಲಕ್, ನಗರಸಭಾಯುಕ್ತರು ವಿಶ್ವೇಶ್ವರ ಬದರಗೆಡೆ, ನಿವೃತಾಧಿಕಾರಿ ತೇಜಮೂರ್ತಿ, ಪರಿಸರ ಪ್ರೇಮಿ ಷಡಕ್ಷರಿ, ಅಧ್ಯಕ್ಷ ಉಮೇಶ್ ಉಪಸ್ಥಿತರಿದ್ದರು. 
ಸಿದ್ಧಿವಿನಾಯಕ ಸಂಘದ ಅಧ್ಯಕ್ಷ ಉಮೇಶ್ ಮಾತನಾಡಿ ನಮ್ಮ ವಾರ್ಡಿನಲ್ಲಿ ಏನೇ ಕುಂದು ಕೊರತೆಗಳು ಬಂದಲ್ಲಿ ಅದನ್ನು ನಾವು ಬಗೆಹರಿಸುತ್ತೇವೆ ಎಂದರು, ನೂತನ ನೂತನ ದಿನಾಚರಣಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಭಾಸ್ಕರ್ ದಯಾನಂದ ತಿಮ್ಲಾಪುರ ಸ್ವಾಮಿ, ಬಿಟಿ ಕುಮಾರ್ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ಲಘುಪಹಾರವಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*