ಸೈಫ್ ಅಲಿ ಖಾನ್ ಪುತ್ರನ ಕೊಠಡಿಗೆ ನುಗ್ಗಿದ ದಾಳಿಕೋರ: 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಕಿರಾತಕ

ಭಾಸ್ಕರ ಪತ್ರಿಕೆ
0

ಮುಂಬೈನ ಬಾಂದ್ರಾ ಪಶ್ಚಿಮದಲ್ಲಿರುವ ನಟ ಸೈಫ್ ಅಲಿ ಖಾನ್ ಅವರ ಮನೆಯೊಳಗೆ ಗುರುವಾರ ಮುಂಜಾನೆ ನಡೆದ ಚೂರಿ ಇರಿತ ಘಟನೆಯ ಆರೋಪಿಯು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಕಿರಿಯ ಮಗ ಜಹಾಂಗೀರ್ ಅವರ ಕೋಣೆಗೆ ಹೋಗಿದ್ದಾನೆ. ಆಗ ಅಲ್ಲಿ ಆರೋಪಿಯನ್ನು ಮೊದಲು ಮನೆಯ ಸಹಾಯಕರು ಗುರುತಿಸಿದ್ದಾರೆ.

ಮನೆಯ ಸಹಾಯಕ ಎಲಿಯಾಮಾ ಫಿಲಿಪ್ (56) ಪೊಲೀಸ್ ದೂರಿನಲ್ಲಿ ಹಲ್ಲೆಗೆ ಸಂಬಂಧಿಸಿದ ಆಘಾತಕಾರಿ ವಿವರಗಳನ್ನು ಹಂಚಿಕೊಂಡಿದ್ದಾರೆ. ಆ ವ್ಯಕ್ತಿ ೧ ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.

ಸೈಫ್ ಅಲಿ ಖಾನ್ ಅವರ ಮನೆಯೊಳಗೆ ನಡೆದ ದಾಳಿಯಲ್ಲಿ ನಟ, ನರ್ಸ್ ಮತ್ತು ಇನ್ನೊಬ್ಬ ಸಿಬ್ಬಂದಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಸೈಫ್ ಅಲಿ ಖಾನ್ ಅವರನ್ನು ಆರು ಬಾರಿ ಇರಿದು ಗಾಯಗೊಳಿಸಲಾಗಿದ್ದು, ಅವರ ಬೆನ್ನುಹುರಿಗೆ ಗಾಯಗಳಾಗಿವೆ. ಘಟನೆಯ ನಂತರ, ಅವರನ್ನು ಅವರ ಮಗ ಇಬ್ರಾಹಿಂ ಆಟೋ ರಿಕ್ಷಾದಲ್ಲಿ ನಗರದ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಪೊಲೀಸ್ ದೂರಿನಲ್ಲಿ ಆರೋಪಿಯನ್ನು ಮೊದಲು ಗುರುತಿಸಿದ ಮನೆಯ ಸಹಾಯಕ ಫಿಲಿಪ್, ಜನವರಿ 15 ರಂದು ರಾತ್ರಿ 11 ಗಂಟೆ ಸುಮಾರಿಗೆ ಖಾನ್ ಅವರ ಕಿರಿಯ ಮಗ ಜಹಾಂಗೀರ್ ಅಲಿಯಾಸ್ ಜಯಬಾಬಾ (4) ಗೆ ಆಹಾರ ನೀಡಿ ಮಲಗಿಸಿದ್ದೆ ಎಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*