23ಕ್ಕೆ ಮಹಿಳಾ ಜಾಗೃತಿ ಸಮಾವೇಶ

ಭಾಸ್ಕರ ಪತ್ರಿಕೆ
0


ಧಾರವಾಡ: ಕರ್ನಾಟಕ ವಿಶ್ವಕರ್ಮ ಜನಸೇನಾ ಸಂಘದಿಂದ ರಾಜ್ಯಮಟ್ಟದ ಪ್ರಥಮ ವಿಶ್ವಕರ್ಮ ಮಹಿಳಾ ಜಾಗೃತಿ ಸಮಾ ವೇಶವನ್ನು ಕವಿಸಂನಲ್ಲಿ ಫೆ.23 ರಂದು ಬೆಳಗ್ಗೆ9 ಗಂಟೆಗೆ ಆಯೋ ಜಿಸಲಾಗಿದೆ ಎಂದು ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಬಡಿಗೇರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತ್ರ ನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಉದ್ಘಾಟನೆ ನೆರವೇರಿಸುವರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕುಂಬಿಯ ಅಭಿನವ ನಾಗಲಿಂಗ ಸ್ವಾಮೀಜಿ, ತಿಂಥಣಿಯ ಮೌನೇಶ್ವರ ಸ್ವಾಮೀಜಿ, ಯಾದಗಿರಿಯ ಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವರಾದ ಸತೀಶ್ ಜಾರಕಿಹೊಳಿ, ಸಂತೋಷ ಲಾಡ್, ಲಕ್ಷ್ಮೀ ಹೆಬ್ಬಾಳಕರ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಪಾಲ್ಗೊಳ್ಳು ವರು. ಕೆಪಿಸಿಸಿ ಉಪಾಧ್ಯಕ್ಷೆ ಪವಿತ್ರಾ ಆಚಾರ ಅಧ್ಯಕ್ಷತೆ ವಹಿಸು ವರು. ವಿವಿಧ ಕ್ಷೇತ್ರದ ಮಹಿಳಾ ಸಾಧಕರನ್ನು ಸನ್ಮಾನಿಸಲಾಗು ವುದು ಎಂದರು. ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷ ಕನ್ನಡ ಸೋಮು ಮಾತನಾಡಿ, ಸಮಾಜವನ್ನು ಪ್ರವರ್ಗ-1ಕ್ಕೆ ಸೇರಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ ಯಲ್ಲಿ ವಿಶ್ವಕರ್ಮರಿಗೆ ಆದ್ಯತೆ ನೀಡಬೇಕು. ವಿಶ್ವಕರ್ಮ ನಿಗಮಕ್ಕೆ 300 ಕೋಟಿ ಅನುದಾನ ನೀಡಬೇಕು. ವಿಧಾನಸೌಧ ಮುಖ್ಯದ್ವಾರದಲ್ಲಿ ವಿಶ್ವಕರ್ಮ ಪ್ರತಿಮೆ ಸ್ಥಾಪನೆ ಸೇರಿದಂತೆ ಸಮಾಜದ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಭಾಸ್ಕರ ಬಡಿಗೇರ, ಮೋಹನ ಅರ್ಕಸಾಲಿ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*