ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ತುಮಕೂರು 1 ಜಿಲ್ಲೆ ತಿಪಟೂರು ಗ್ರಾಮಾಂತರ ತಾಲೂಕು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಆದೇಶದ ಮೇರೆಗೆ ರಾಜ್ಯದ್ಯಂತ 33023 ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛಗೊಳಿಸಲು ಆದೇಶಿಸಿದ್ದು ಕಳೆದ ವರ್ಷ ಆದೇಶ ಪರಿಪಾಲನೆಯಾಗಿ ಯಶಸ್ವಿಯಾಗಿದೆ. ಈ ವರ್ಷ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಾಲೂಕಿನ ಬಿಳಿಗೆರೆ ವಲಯದ ಅರಳುಗುಪ್ಪೆ ಕಾರ್ಯಕ್ಷೇತ್ರದ ಚನ್ನಕೇಶವಸ್ವಾಮಿ ದೇವಾಲಯದ ಆವರಣವನ್ನು ಶುಚಿಗೊಳಿಸಿದ್ದ ಯೋಜನಾಧಿಕಾರಿ ಆದ ಸುರೇಶ್ ಕೆ ರವರು ವಿಶೇಷವಾಗಿ ಪ್ರತಿ ವರ್ಷವೂ ಕೂಡ ವೀರೇಂದ್ರ ಹೆಗ್ಗಡೆಯವರು ದೇವಸ್ಥಾನ ಮಸೀದಿ ಚರ್ಚ್ ಜೈನ್ ಬಸದಿಗಳನ್ನು ಸ್ವಚ್ಛತೆ ಮಾಡುವ ಬಗ್ಗೆ ಮಾರ್ಗದರ್ಶನ ನೀಡಿರುತ್ತಾರೆ ಅವರ ಆಶಯದಂತೆ ವರ್ಷದಲ್ಲಿ ಎರಡು ಬಾರಿ ಮಕರ ಸಂಕ್ರಾಂತಿ ಹಾಗೂ ಸ್ವಾತಂತ್ರ್ಯದಿನದ ಸವಿನೆನಪಿಗಾಗಿ ಶ್ರದ್ಧಾ ಕೇಂದ್ರಗಳ ಸ್ವಚ್ಛತೆ ಮಾಡುವ ಕರೆ ನೀಡಿದ್ದಾರೆ ಎಂದು ತಿಳಿಸಿದರು ಭಕ್ತಾದಿಗಳು ದೇವಾಲಯದ ಆವರಣದಲ್ಲಿ ಶುಚಿತ್ವ ಕಾಪಾಡಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಮೇಲ್ವಿಚಾರಕರ ರಮೇಶ್. ಜಿ ತಾಲೂಕು ಜ್ಞಾನ ವಿಕಾಸ ಸಮನ್ವಯಧಿಕಾರಿ ಭಾಗ್ಯಲಕ್ಷ್ಮೀ ಸೇವಾಪ್ರತಿನಿಧಿ, ಶೈಲಾ,ಸ್ವಸಹಾಯ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ದೇವಸ್ಥಾನ ಸ್ವಚ್ಛಗೊಳಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವತಿಯಿಂದ ಶ್ರಧ್ಧಾ ಕೇಂದ್ರ ಶುಚಿತ್ವ ಕಾರ್ಯಕ್ರಮ ಯಶಸ್ವಿ
ಜನವರಿ 13, 2025
0
Tags

