ಕರಡಾಳು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಭಾಸ್ಕರ ಪತ್ರಿಕೆ
0


ತಿಪಟೂರು: ಕಲ್ಪತರು ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಕರಡಾಳು ಸಂತೆ ಮೈದಾನದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಆಚರಿಸಲಾಯಿತು. 
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತರಾದ ಡಾ. ಭಾಸ್ಕರ್, ಶಾಲೆಯ ಮುಖ್ಯ ಶಿಕ್ಷಕರಾದ ಪಟ್ಟಾಭಿರಾಮು, ರೈತ ಕವಿ ಡಾ. ಪಿ ಶಂಕರಪ್ಪ ಬಳ್ಳೇಕಟ್ಟೆ, ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಾದ ಸರ್ವೇಶಾಚಾರ್ ಉದ್ಘಾಟಿಸಿ ಮಾತನಾಡಿದರು. 
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ನನ್ನು ವಿತರಿಸಲಾಯಿತು, ಮತ್ತು ಕಾರ್ಮಿಕ ಸಂಘದ ಧರಣೇಶ್, ಗಂಗಾಧರ ಹಾರೋಘಟ್ಟ, ಪರಮೇಶ್ವರಯ್ಯ ಸೇರಿದಂತೆ ಶಾಲಾ ಶಿಕ್ಷಕ/ಕಿ ಯರು ಮತ್ತಿತರರು ಉಪಸ್ಥಿತರಿದ್ದರು. ಮಕ್ಕಳಿಗೆ ಸಿಹಿ ಹಂಚುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು, 


ಇದೇ ಸಂದರ್ಭದಲ್ಲಿ ‌ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಾದ ಸರ್ವೇಶಾಚಾರ್ ಅವರಿಗೆ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*