ಅಖಂಡ ಕರ್ನಾಟಕ ರಕ್ಷಣಾ ಸೇವಾದಳದ 7 ನೇ ವಾರ್ಷಿಕೊತ್ಸವ, 69ನೇ ಕನ್ನಡ ರಾಜ್ಯೋತ್ಸವ ಹಾಗೂ ಕುವೆಂಪು ಜಯಂತಿ

ಭಾಸ್ಕರ ಪತ್ರಿಕೆ
0



ತಿಪಟೂರು:ಅಖಂಡ ಕರ್ನಾಟಕ ರಕ್ಷಣಾ ಸೇವಾದಳದ 7ನೇ ವಾರ್ಷಿಕೊತ್ಸವ, 69ನೇ ಕನ್ನಡ ರಾಜ್ಯೋತ್ಸವ ಹಾಗೂ ಕುವೆಂಪು ಜಯಂತಿಯ ಅಂಗವಾಗಿ ವಿವಿಧ ಕ್ಷೇತ್ರಗಲ್ಲಿ ಸಾಧನೆ ಮಾಡಿದ 301 ಸಾಧಕರಿಗೆ ರಾಷ್ಟ್ರ ಮಟ್ಟದ "ಸೇವಾ ರತ್ನ" ಮತ್ತು ಕನ್ನಡ ಮಾದ್ಯಮದಲ್ಲಿ ಓದಿದ 250 ಜನ ವಿಧ್ಯಾರ್ಥಿಗಳಿಗೆ ರಾಜ್ಯ ಮಟ್ಟದ "ವಿದ್ಯಾ ರತ್ನ" ಪ್ರಶಸ್ತಿ ನೀಡಿ ಗೌರವಿಸಿ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೈಸೂರು ಸಿಟಿ, ರೋಟರಿ ಭವನದಲ್ಲಿ ರಾಜ್ಯ ವಕೀಲರ ಪರಿಷತ್‌ ಉಪಾಧ್ಯಕ್ಷ ಹಿರಿಯ ವಕೀಲ ಚಂದ್ರಮೌಳಿ ಮತ್ತು ಸಂಘಟಿತರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಖಂಡ ಕರ್ನಾಟಕ ರಕ್ಷಣಾ ಸೇವದಳ ಕಳೆದ 7 ವರ್ಷಗಳಿಂದ ವಿವಿಧ ರೀತಿಯ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದು ಸಂಘ ಸಂಸ್ಥೆಗಳು ಸರಕಾರಗಳ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದು, ಕನ್ನಡ ನಾಡು ನುಡಿ ಉಳಿವಿಗೆ ಇಂತಹ ಸಂಸ್ಥೆಗಳ ಅವಶ್ಯಕತೆ ಇದೆ ಎಂದರು.

ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ ಕಾನೂನು ಘಟಕ ರಾಜ್ಯಾಧ್ಯಕ್ಷ ಹಿರಿಯ ವಕೀಲ ಎಂ.ಗುರುಪ್ರಸಾದ್‌ ಪ್ರಾಸ್ತಾವಿಕ ವಾಗಿ ಮಾತನಾಡಿ ಅಖಂಡ ಕರ್ನಾಟಕ ರಕ್ಷಣ ಸೇವಾದಳ ಕಳೆದ 7 ವರ್ಷಗಳಿಂದ ಕರ್ನಾಟಕ ರಾಜ್ಯದ 31 ಜಿಲ್ಲೆಗಳಲ್ಲಿ ಸಂಚರಿಸಿ ಘಟಕಗಳನ್ನು ಸ್ಥಾಪಿಸಿ ರಾಜ್ಯಾದ್ಯಂತ ಜನಸಾಮಾನ್ಯರಿಗೆ ಹಾಗೂ ಅನ್ಯಾಯದ ವಿರುದ್ಧ ಹಾಗೂ ಕನ್ನಡ ನಾಡು-ನುಡಿ ಜಲ ಪರಿಸರ ಸಂರಕ್ಷಣೆ ಪರವಾಗಿ ನಿರಂತರವಾಗಿ ಮಂಡ್ಯ, ಮೈಸೂರು, ಕೋಲಾರ, ಬಾಗಲಕೋಟೆ, ಮಂಗಳೂರು, ಚಿತ್ರದುರ್ಗ, ಹುಬ್ಬಳಿ-ಧಾರವಾಡ, ಬಳ್ಳಾರಿ ಬೆಂಗಳೂರು, ಉತ್ತರ ಕನ್ನಡ ಸೇರಿದಂತೆ ಇನ್ನೂ ಹಲವಾರು ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರ ಸಹಯೋಗ ದೊಂದಿಗೆ ನಿರಂತರವಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಿತ್ಯೋತ್ಸವ ಕಾರ್ಯಕ್ರಮಗಳನ್ನಾಗಿ ಮಾಡುವ ಮುಖಾಂತರ ಶಾಲಾ ಮಕ್ಕಳಿಗೆ ಕನ್ನಡ ಭಾಷೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶರಣ ಪರಂಪರೆ ಜಾಗೃತಿ ಮೂಡಿಸುವುದು ಜನಸಾಮಾನ್ಯರಿಗೆ ಕಾನೂನು ಅರಿವು ಮತ್ತು ನೆರವು ನೀಡುವ ಮುಖಾಂತರ ಜನಜಾಗೃತಿಗೊಳಿಸುವುದು ನಮ್ಮ ಸಂಘಟನೆ ಮುಖ್ಯ ಉದ್ದೇಶವಾಗಿದ್ದು ಪ್ರತಿಯೊಬ್ಬರ ಮಾನವ ಹಕ್ಕುಗಳು ಮಾನವ ಮೌಲ್ಯ ಉಲ್ಲಂಘನೆಯಾಗದಂತೆ ಸಹೋದರ ಸಹೋದರಿಯರ ಮನೋಭಾವನೆ ಬೆಳೆಸುವುದು ನಮ್ಮ ಸಂಘಟನೆಯ ಉದ್ದೇಶವಾಗಿದೆ ಎಂದರು. 

ಮುಂದಿನ ದಿವಸಗಳಲ್ಲಿ ಸಮಸ್ತ ನಾಡಿನ ಜನತೆ ನಮ್ಮ ಈ ಸಂಘಟನೆಯ ಬಲವರ್ಧನೆಗೆ ರಾಜ್ಯಾದ್ಯಂತ ವಕೀಲರು ಮತ್ತು ಸಾರ್ವಜನಿಕರು ಹೆಚ್ಚು ಬೆಂಬಲ ನೀಡುವಂತೆ ಮನವಿ ಮಾಡಿದರು. ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳದ ಸಂಸ್ಥಾಪಕ ರಾಜ್ಯಾಧ್ಯಕ್ಷ ವಕೀಲ ಡಾ.ಸಿಂಹ ಶಿವುಗೌಡ ಭಾರತಿಯ ಕಾರ್ಯಕ್ರಮ ಕುರಿತು ಮಾತನಾಡಿ ನಾವು ಹಲವಾರು ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ಸನ್ಮಾನಿಸುವುದು ನಮ್ಮ ಸಂಘಟನೆಯ ಉದ್ದೇಶವಾಗಿದ್ದು ನಾನು ಈ ಹಿಂದೆ ಬಿಎಸ್‌ಎಫ್ ಯೋಧನಾಗಿದ್ದು ಇಂದು ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಬೇಕು ಎಂಬ ನನ್ನ ಮಹತ್ವಕಾಂಕ್ಷೆ ಅಡಿಯಲ್ಲಿ ಸಂಘಟನೆಯನ್ನು ಹುಟ್ಟು ಹಾಕಿ ರಾಜ್ಯಾದ್ಯಂತ ಸಂಘಟಿಸಿ ನೊ೦ದವರ ಪರ ನಿಂತು ಸೇವೆ ಸಲ್ಲಿಸುವುದು ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ತಿಪಟೂರು ಘಟಕದ ಪದಾಧಿಕಾರಿಗಳು ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ರಾಜ್ಯ ಅಧ್ಯಕ್ಷರು ಡಾ. ಸಿಂಹ ಶಿವು ಗೌಡ ಭಾರತೀಯ, ರಾಜ್ಯ ಕಾರ್ಯದರ್ಶಿ ವೆಂಕಟೇಶ್ ಗೌಡ ರವರಿಗೆ ವಿಶೇಷ ಕೊಬ್ಬರಿ ಹಾರ ಹಾಕಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಿಪಟೂರು ಘಟಕದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸಂಘದ ವತಿಯಿಂದ ರಾಷ್ಟ್ರಮಟ್ಟದ  ಸೇವರತ್ನ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ತಿಪಟೂರು ಘಟಕ ಸಂಘಕ್ಕೆ ಶುಭ ಹಾರೈಸಿದರು.

ವರದಿ: ಕುಪ್ಪಾಳು ಧರಣೇಶ್ 





ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*