ತಿಪಟೂರು: ದಾಸೋಹ ದಿನವಾದ ಇಂದು ಪದ್ಮಭೂಷಣ ಕರ್ನಾಟಕ ರತ್ನ ತ್ರಿವಿಧ ದಾಸೋಹಿಗಳಾದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಆರನೇ ವರ್ಷದ ಪುಣ್ಯ ಸ್ಮರಣೆಯನ್ನು ಅರಳಿ ಕಟ್ಟೆಯ ,ಹೂವು ಹಣ್ಣು ತರಕಾರಿ ಮಾರುಕಟ್ಟೆ, ದೊಡ್ಡಪೇಟೆ, ಅರಳಿ ಕಟ್ಟೆಯ ಸುತ್ತಮುತ್ತಲಿನ ವ್ಯಾಪಾರಸ್ಥರು, ಹಾಗೂ ಜೆಮ್ಸ್ ಫೌಂಡೇಶನ್ ತಿಪಟೂರು, ಮತ್ತು ತರಕಾರಿ ಗಂಗಾಧರ್ ಸ್ನೇಹ ವೃಂದದ ವತಿಯಿಂದ ,ಪುಣ್ಯ ಸ್ಮರಣೆಯನ್ನು ಸಂಪ್ರದಾಯದಂತೆ ಪೂಜಾ ಮಾಡುವ ಮುಖಾಂತರ ಪೂಜ್ಯರಿಗೆ ನಮನ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ತ್ರಿವಿಧ ದಾಸೋಹಿಗಳ ಹೆಸರಿನಲ್ಲಿ ಅನ್ನ ದಾಸೋಹ ಸೇವೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಡಾ. ಓಹಿಲಾ ತರಕಾರಿ ಗಂಗಾಧರ್, ಫೋಟೋ ಪ್ರಸನ್ನ ಕುಮಾರ್ ,ಮಾಜಿ ನಗರಸಭಾ ಸದಸ್ಯ ತರಕಾರಿ ಗಂಗಾಧರ್, ಕ್ಯಾಪ್ಟನ್ ಲೋಕೇಶ್ , ನಗರಾಧ್ಯಕ್ಷರು ಬಾ ಜ ಪಾ ಗುಲಾಬಿ ಸುರೇಶ್, ರಂಗಾಪುರ ಕ್ಷೇತ್ರದ ಅಧ್ಯಕ್ಷರಾದ ವಿಶ್ವನಾಥ್ ಹೊಸಳ್ಳಿ, ಹಾವೇನಹಳ್ಳಿ ಆನಂದ್ ನಿರ್ದೇಶಕರು ಪ್ರಾಥಮಿಕ ಸಹಕಾರ ಸಂಘ ಗೋರಗೊಂಡನಹಳ್ಳಿ, ಉಷಾ ಲೋಕೇಶ್ ಉಪಾಧ್ಯಕ್ಷರು ರೈತ ಸಹಕಾರ ಸಂಘ ಹೊನ್ನವಳ್ಳಿ, ಪ್ರತಿಭಾ ಜೈರಾಮ್, ರಮ್ಯಾ ಬದ್ರಿ, ಶ್ರೀಮತಿ ಛಾಯಾಮಣಿ ಸಿರಿಗಂಧ ಗುರು, ಪರಿಸರ ಪ್ರೇಮಿ ಕೋಟೆ ಅಂಗಡಿ ಮನೆ ಶಿವಣ್ಣ, ಉಮೇಶ್, ಪಚ್ಚೆ ಮುತ್ತು, ವರುಣ, ರವಿ, ಇನ್ನಿತರರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

