ಯುಪಿಯಲ್ಲಿ ಹಲಾಲ್ ಉತ್ಪನ್ನ ನಿಷೇಧ: ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ

ಭಾಸ್ಕರ ಪತ್ರಿಕೆ
0


ಹಲಾಲ್ ಉತ್ಪನ್ನಗಳನ್ನು ನಿಷೇಧಿಸಿರುವ ಉತ್ತರ ಪ್ರದೇಶ ಸರಕಾರದ ವಿರುದ್ಧ ಜಂಇಯ್ಯತುಲ್ ಉಲಮಾಯೆ ಹಿಂದ್ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬಂತು. ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹತ ನೀಡಿದ ಮಾಹಿತಿ ಎಲ್ಲರನ್ನ ದಂಗುಬಡಿಸಿದೆ. ಮಾಂಸೇತರ ಉತ್ಪನ್ನಗಳಿಗೂ ಹಲಾಲ್ ಸರ್ಟಿಫಿಕೇಟ್ ನೀಡಲಾಗುತ್ತಿದೆ ಎಂದವರು ಸುಪ್ರೀಂ ಕೋರ್ಟ್ ನಲ್ಲಿ ಹೇಳಿದರು. ಸಿಮೆಂಟ್ ಗೆ ಹಲಾಲ್ ಸರ್ಟಿಫಿಕೇಟ್ ನೀಡಿರುವುದನ್ನು ಕಂಡು ತಾನು ದಿಗ್ಭ್ರಮೆ ಗೊಂಡಿರುವುದಾಗಿ ಮೆಹೆತ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದರು.

ಹಲಾಲ್ ಎಂಬುದು ಜೀವನ ಕ್ರಮಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಕೇಂದ್ರ ಸರಕಾರವೇ ವ್ಯಕ್ತಪಡಿಸಿದೆ ಮತ್ತು ಹಲಾಲ್ ಸರ್ಟಿಫಿಕೇಟ್ ಸಸ್ಯೇತರ ಆಹಾರಗಳಿಗೆ ಮಾತ್ರ ಸಂಬಂಧಿಸಿದ್ದು ಅಲ್ಲ ಎಂದು ಜಮ್ ಇಯತ್ತುಲ್ ಉಲಮಾಯೆ ಹಿಂದ್ ನ ನ್ಯಾಯವಾದಿ ಶಂಸಾದ್ ಇದಕ್ಕೆ ಉತ್ತರವನ್ನು ನೀಡಿದರು.

ಇದೇ ವೇಳೆ ಸಿಮೆಂಟಿಗೂ ಹಲಾಲ್ ಸರ್ಟಿಫಿಕೇಟ್ ಅನ್ನು ನೀಡಿರುವುದನ್ನು ಕಂಡು ತಾನು ಅಚ್ಚರಿಪಟ್ಟೆ ಮತ್ತು ಸುಪ್ರೀಂ ಕೋರ್ಟ್ ಕೂಡ ಇದನ್ನು ನೋಡಿದರೆ ಅಚ್ಚರಿ ಪಟ್ಟೀತು ಎಂದು ಮೆಹೆತ ಹೇಳಿದರು. ಈ ಮುಖಾಂತರ ಹಲಾಲ್ ಕಂಪನಿಗಳು ಕೋಟ್ಯಾಂತರ ರೂಪಾಯಿಯನ್ನು ಸಂಪಾದಿಸುತ್ತಿವೆ ಎಂದು ಕೂಡ ಮೆಹತ ಹೇಳಿದರು.

ಹಲಾಲ್ ಉತ್ಪನ್ನಗಳ ಉತ್ಪಾದನೆ ವಿತರಣೆ ಮತ್ತು ಸಂಗ್ರಹ ವನ್ನು ನಿಷೇಧಿಸಿ 2024 ನವೆಂಬರ್ 18ರಂದು ಉತ್ತರ ಪ್ರದೇಶ ಸರಕಾರ ಆದೇಶ ನೀಡಿತ್ತು. ಇದರ ವಿರುದ್ಧ ಜಮೀಯತ್ ಸುಪ್ರೀಂ ಕೋರ್ಟ್ ನ ಬಾಗಿಲು ತಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*