ಕುಣಿಗಲ್: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು. ಸಮಾಜ ಕಲ್ಯಾಣ ಇಲಾಖೆ. ಹಾಗೂ ಅನಾಹತ ಯುನೈಟೆಡ್ ಎಫರ್ಟ್ಸ್ ಪೌಂಢೇಶನ್ ಸಹಯೋಗದೊಂದಿಗೆ ಕರಿಯರ್ ಮೇಳಕಾರ್ಯಕ್ರಮ ವನ್ನು ಶ್ರೀ ಮತಿ ಇಂದಿರಾಗಾಂಧಿ ವಸತಿ ಶಾಲೆ ಕೊತ್ತಗೆರೆ 350 ವಸತಿ ಶಾಲೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ದೇಶ: ಆರ್ಥಿಕವಾಗಿ ಹಿಂದುಳಿದ ವಸತಿ ಶಾಲಾ ಮಕ್ಕಳಿಗೆ ಮುಂದಿನ ಭವಿಷ್ಯದಲ್ಲಿ ಉದ್ಯೋಗವನ್ನು ಪಡೆಯುವ ಸಲುವಾಗಿ ಕ್ರೈಸ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀ ಕಾಂತ್ ಎಸ್ ಸುಣಕುಪ್ಪಿ ರವರು ಮಾತನಾಡಿ ಮಕ್ಕಳಿಗೆ ನನ್ನ ವೃತ್ತಿಯನ್ನ ಆಯ್ಕೆ ಮಾಡಿಕೊಳ್ಳಲು ಈ ವಯಸ್ಸಿನಲ್ಲಿ ತಿಳಿಸಿದರೆ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ತಿಳಿಸಿದರು.
ನಂತರ ಮಾತನಾಡಿದ ತರಬೇತಿ ಪಡೆದ ನಾಗರಾಜು ಕೆ. ಹಾಗೂ ಯೊಗೇಶ್ ಎಲ್.ಬಿ ರವರು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಮಾಹಿತಿ ತಿಳಿಯಲು ಅವಕಾಶ ಮಾಡಿಕೊಡುತ್ತದೆ. ನಂತರ ವಸತಿ ಶಾಲೆಯ ಮಕ್ಕಳು ಮಾಡಿರುವ ಮಾಡೆಲ್ ಗಳನ್ನ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರು ವೀಕ್ಷಣೆ ಮಾಡಿದರು
ಈ ಅವಕಾಶವನ್ನು ಸರ್ಕಾರಿ ಪ್ರೌಢಶಾಲೆ ಭಕ್ತರಹಳ್ಳಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವೀಕ್ಷಿಸಿದರು.
ಈ ಸಮಾರಂಭದಲ್ಲಿ ಎಲ್ಲಾ ಶಿಕ್ಷಕರು ಮತ್ತು ಮಕ್ಕಳು ಹಾಗೂ ಅನಾಹತ ಯುನೈಟೆಡ್ ಎಫರ್ಟ್ಸ್ ಪೌಂಢೇಶನ್ ಮೆಂಟರ್ ಲೀಡರ್ ಆದ ನಿಂಗಪ್ಪ ಡಿ.ಆರ್.ರವರು ಹಾಜರಿದ್ದರು.

