39ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಭಾಸ್ಕರ ಪತ್ರಿಕೆ
0

























ತುಮಕೂರು: ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಜಿಲ್ಲಾಘಟಕ ತುಮಕೂರು ಸಹಯೋಗದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನವನ್ನ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

























ಸಮ್ಮೇಳನ ಉದ್ಘಾಟಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮಾತನಾಡಿ ಪತ್ರಿಕೆ ವೃತ್ತಿಯಾಗಿದ್ದಾಗ ಪತ್ರಿಕೆ ಸಮಾಜದ ಹಿತ,ದೇಶದ ಹಿತವಾಗಿತ್ತು, ಸಮಾಜದ ಮೌಲ್ಯಗಳಿಗೆ ಆದ್ಯತೆ ನೀಡುತ್ತಿತ್ತು, ಆದರೇ ಯಾವಾಗ ಪತ್ರಿಕೆ ಉದ್ಯಮವಾಗಿದೆ ಆಗಿನಿಂದ ಜವಾಬ್ದಾರಿ ಸ್ವಲ್ಪ ಕಡಿಮೆಯಾಗುತ್ತಿದೆ, ಪತ್ರಿಕೆಗಳು ವೃತ್ತಿ ಪವಿತ್ರತೆ ಕಳೆದುಕೊಳ್ಳಬಾರದು. ಸಂವಿಧಾನದ ಮೌಲ್ಯ ಎತ್ತಿಹಿಡಿಯುವುದು, ಸಮಾಜದ ಅಸಮಾನತೆ ವಿರುದ್ದ ಧ್ವನಿ ಎತ್ತುವುದು ಕೆಲಸ ವಾಗಬೇಕು,ಪತ್ರಿಕೆಗಳು ವಸ್ತು ಸ್ಥಿತಿಯನ್ನ ಸಮಾಜದ ಮುಂದೆಇಡುವ ಕೆಲಸ ವಾಗಬೇಕು,ಸಮಾಜದಲ್ಲಿ ನಡೆಯುವ ಘಟನೆಗಳನ್ನ ವಸ್ತು ನಿಷ್ಠವಾಗಿ ಬರೆಯಬೇಕು,























ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಅಪಾಯಕಾರಿ,ಟೀಕೆ ಟಿಪ್ಪಣಿಗಳು ಸಮಾಜಕ್ಕೆ ಪೂರಕವಾಗಿರಬೇಕು ,ಸಮಾಜಕ್ಕೆ ಮಾರಾಕವಾಗಿರ ಬಾರದು, ಸುದ್ದಿ ಮಾಡುವ ಮುಂಚೆ ನಾಲ್ಕರು ಭಾರೀ ಯೋಚಿಸಿ ಬರೆಯಬೇಕು,ಸುದ್ದಿ ಸಮಾಜತಿದ್ದುವಂತಿರಬೇಕು.
ಸಮಾಜದಲ್ಲಿ ಕೆಳಜಾತಿ ಮೇಲ್ಜಾತಿ ಅನೋದು ವಾಸ್ತವ, ಚತುರ್ವರ್ಣ ವ್ಯವಸ್ಥೆಯಲ್ಲಿ ಎಲ್ಲರಿಗೂ ಅರ್ಥಿಕವಾಗಿ ಸಮಾಜಿಕವಾಗಿ ಶಕ್ತಿ ಬಂದಾಗ ಮಾತ್ರ ಬದಲಾವಣೆ ಸಾಧ್ಯ,

ರಾಜಕಾರಣಿಗಳು,ಸಮಾಜ ಸುಧಾರಕರು, ಅರ್ಥಮಾಡಿಕೊಳ್ಳ ಬೇಕು ಯಾರು ದುರ್ಬಲ ವರ್ಗದ ಶೋಷಿತರು, ಯಾರಿಗೆ ಧ್ವನಿಇಲ್ಲ, ಅಂತವರ ಧ್ವನಿಯಾಗಿ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಪತ್ರಕರ್ತರ ಮೇಲೆ ವಿಶ್ವಾಸ ಜಾಸ್ತಿ, ಜನ ಇಟ್ಟಿರುವ ವಿಶ್ವಾಸಾರ್ಹತೆಗೆ ದಕ್ಕೆಯಾಗದಂತೆ ಕೆಲಸ ಮಾಡಬೇಕು.
ಎಲ್ಲಾ ಜನರು ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಬೆರಕು,
ಮಾಧ್ಯಮಗಳು ಮೂಢನಂಬಿಕೆ ವಿಚಾರದಲ್ಲಿ ದೂರವಿರಬೇಕು.

ವಸ್ತು ಸ್ಥಿತಿಯ ಅರಿವಿರ ಬೇಕು ಅಧ್ಯಯನ ಶೀಲರಾಗಬೇಕು, ಅಧ್ಯಯನ ಶೀಲತೆ ಪತ್ರಿಕೋಧ್ಯಮದಲ್ಲಿ ಅಧ್ಯಯನ ಶೀಲತೆ ಕಡಿಮೆಯಾಗುತ್ತಿದೆ. ನನ್ನ ಮೇಲೆ ಹಾಗೂ ನಮ್ಮ ಸರ್ಕಾರದ ಮೇಲೆ ಬರೆಯಲಿ .ಬರೆಯದೆ ಬಿಡಲಿ,ನಾನು ಪತ್ರಿಕಾ ಸ್ವತಂತ್ರವನ್ನ ಗೌರವಿಸುತ್ತೇನೆ.
ಎಲ್ಲರೂ ಸಮಾಜದಲ್ಲಿ ಜವಾಬ್ದಾರಿಯನ್ನ ಸೂಕ್ತವಾಗಿ ನಿರ್ವಹಿಸಿ, ಸಂವಿಧಾನ ಪ್ರತಿಯೊಬ್ಬರು ತಿಳಿದುಕೊಳ್ಳಿ,ಎಂದ ಅವರು

ಗ್ರಾಮೀಣ ಪತ್ರಕರ್ತರ ಬಸ್ ಪಾಸ್, ಶೀಘ್ರವಾಗಿ ಕೆಲವೇ ದಿನಗಳಲ್ಲಿ ವಿತರಣೆ ಮಾಡುತ್ತೇವೆ ಹಾಗೂ ಪತ್ರಕರ್ತರ ಆರೋಗ್ಯ ವಿಮೆ ವಿತರಣೆಗೆ ಕ್ರಮಕೈಗೊಳ್ಳಲಾಗುವುದು.
ಚರ್ಚೆಗಳು ಸಮಾಜ ಮುಖಿಯಾಗಿ ಇರಲಿ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಗೃಹಸಚಿವ ಡಾ// ಜಿ ಪರಮೇಶ್ವರ್ ರಾಜ್ಯಾಧ್ಯಕ್ಷ ಶಿವಾನಂದಾತಗಡೂರು,ಸಹಕಾರಿ ಸಚಿವ ಕೆ.ಎನ್ ರಾಜಣ್ಣ,ಶಾಸಕರಾದ ಕೆ.ಷಡಕ್ಷರಿ.ಬಿಜಿ ಜ್ಯೋತಿಗಣೇಶ್,ಗುಬ್ಬಿ ಶಾಸಕ ಎಸ್ ಆರ್ ಶೀನಿವಾಸ್. ಟಿ.ಬಿ ಜಯಚಂದ್ರ, ಜಿಲ್ಲಾಧ್ಯಕ್ಷ ಚಿ.ನಿ ಪುರುಷೋತ್ತಮ್. ಆರ್ ರಾಜೇಂದ್ರ,ಸೊಗಡು ಶಿವಣ್ಣ, ಪ್ರಜಾಪ್ರಗತಿ ನಾಗಣ್ಣ,ಸೇರಿದಂತೆ ಅನೇಕರು ಉಪಸ್ಥಿತರಿದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*