ತಿಪಟೂರು: ದಿನಾಂಕ 22-01-2025ನೇ ಬುಧವಾರದಂದು ಬೆಳಿಗ್ಗೆ 9-30 ಗಂಟೆಗೆ ಗೆಳೆಯರ ಬಳಗ, ಶ್ರೀ ಶಿವಕುಮಾರಸ್ವಾಮೀಜಿ ವೃತ್ತ ಇವರ ವತಿಯಿಂದ ನಡೆದಾಡುವ ದೇವರು ತ್ರಿವಿಧ ದಾಸೋಹ ಮೂರ್ತಿಗಳು, ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ। ಶಿವಕುಮಾರಸ್ವಾಮಿಗಳವರ 6ನೇ ವರ್ಷದ ಪುಣ್ಯಸಂಸ್ಮರಣೋತ್ಸವದ ಅಂಗವಾಗಿ
- ಶ್ರೀ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಯವರು ಸುಕ್ಷೇತ್ರ, ಕೆರೆಗೋಡಿ ರಂಗಾಪುರ.
- ಶ್ರೀ ಶ್ರೀ ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಶ್ರೀ ಕಾಡಸಿದ್ದೇಶ್ವರ ಮಠ, ನೊಣವಿನಕೆರೆ.
- ಶ್ರೀ ಶ್ರೀ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಮಹಾಸ್ವಾಮೀಜಿಯವರುಗುರುಕುಲಾನಂದಾಶ್ರಮ, ಕೆ.ಆರ್. ಬಡಾವಣೆ, ತಿಪಟೂರು.
ಇವರುಗಳ ದಿವ್ಯ ಉಪಸ್ಥಿತಿಯಲ್ಲಿ ಡಾ।। ಶಿವಕುಮಾರಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ
ಅನ್ನ ಸಂತರ್ಪಣಾ ಕಾರ್ಯಕ್ರಮ ಏರ್ಪಡಿಸಿದೆ. ಸದ್ಭಕ್ತರು ಸಕಾಲಕ್ಕೆ ಆಗಮಿಸಿ ಹರ ಗುರು ಚರಮೂರ್ತಿಗಳ ಕೃಪಾಶೀರ್ವಾದಗಳಿಗೆ ಪಾತ್ರರಾಗಬೇಕಾಗಿ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರಸ್ವಾಮೀಜಿ ವೃತ್ತ ಗೆಳೆಯರ ಬಳಗ ಕೋರಿದ್ದಾರೆ.


