'ಇಂದು ಸಂಜೆ' ಪತ್ರಿಕೆಯ ಸಂಪಾದಕರಾದ ಡಾ. ಜಿ.ವೈ. ಪದ್ಮ ನಾಗರಾಜ್ ರವರು ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಸಂಪಾದಕರು ಮತ್ತು ವರದಿಗಾರರ ಸಂಘಕ್ಕೆ ರಾಜ್ಯ ಸಮಿತಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಪಾದಕರ ಹಾಗೂ ವರದಿಗಾರರ ಸಂಘ ತಿಪಟೂರು ಘಟಕದ ೨೦೨೫ ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರಾಚಾರ್ ಮತ್ತು ತಿಪಟೂರು ತಾಲೂಕು ವರದಿಗಾರರಾದ ಶ್ರೀಮತಿ ಶುಭ ವಿಶ್ವಕರ್ಮ, ಪದಾಧಿಕಾರಿಗಳಾದ ಧರಣೀಶ್ ಕುಪ್ಪಾಳು, ರಾಜು ಬೆಣ್ಣೀಹಳ್ಳಿ, ಸತೀಶ್ ಮುಳ್ಳೂರು ಉಪಸ್ಥಿತರಿದ್ದರು.



