ಹೊಸದುರ್ಗ ಶಾಸಕ ಬಿ.ಜಿ ಗೊವಿಂದಪ್ಪ ಅವರನ್ನು ಭೇಟಿಯಾದ ಕ.ವಿ.ಜ.ಸೇ.ಸಂ ರಾಜ್ಯಾಧ್ಯಕ್ಷ ಸೋಮಶೇಖರ್ (ಕನ್ನಡ ಸೋಮು)

ಭಾಸ್ಕರ ಪತ್ರಿಕೆ
0

 


ಬೆಂಗಳೂರು: ದಿನಾಂಕ 23.01.2024ನೇ ಗುರುವಾರ  ಶಾಸಕರ ಭವನದಲ್ಲಿ ಹೊಸದುರ್ಗ ತಾಲೂಕಿನ ಜನಪ್ರಿಯ ಶಾಸಕರಾದ ಬಿ ಜಿ ಗೋವಿಂದಪ್ಪ ರವರನ್ನು ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘದ ರಾಜ್ಯಾಧ್ಯಕ್ಷ ಎಂ. ಸೋಮಶೇಖರ್ (ಕನ್ನಡ ಸೋಮು) ಅತ್ತಿಬೆಲೆ ಬೆಂಗಳೂರು ಗೌರವಾಧ್ಯಕ್ಷರಾದ ಹೊಸದುರ್ಗ ಬಿ ಎಸ್ ಪ್ರಕಾಶ ಚಾರ್. ರಾಜ್ಯ ಉಪಾಧ್ಯಕ್ಷರಾದ ಕೆ ಟಿ .ಜಯಣ್ಣ. ಬೆಂಗಳೂರು ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸದುರ್ಗ ಪರಮೇಶ್ವರಚಾರ್, ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸದುರ್ಗ ಮೇತ್ತಿನಹೊಳೆ ಎಸ್. ಗಿರಿಜಾ( ವಿಕಾಸ ಸೌದ ಬೆಂಗಳೂರು) ಹೊಸದುರ್ಗದ ದೇವಾಂಗ ಸಮಾಜದ ಮುಖಂಡರು ರಾಜಕೀಯ ನಾಯಕರು ಗೋ. ತಿಪ್ಪೇಶ್ ಹಾಗೂ ವೀರಶೈವ ಲಿಂಗಾಯತ ಸಮಾಜದ ರಾಜಕೀಯ ನಾಯಕರು ಅರಳಿಹಳ್ಳಿ. ಲೋಕೇಶ್ ರವರ ಸಮ್ಮುಖದಲ್ಲಿ ಶಾಸಕರ ಭವನದಲ್ಲಿ ಇಂದು ಭೇಟಿಯಾಗಿ ದಿನಾಂಕ 05/03/2025 ನೇ ಬುಧವಾರ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಂಘದ 5 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಲಾಯಿತು ಹಾಗೂ ಈ ಸಮಾರಂಭದ ಉದ್ಘಾಟಕರಾಗಿ ನಾಡಿನ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಗೂ ಉಪಮುಖ್ಯಮಂತ್ರಿ ಸನ್ಮಾನ್ಯ ಡಿ ಕೆ. ಶಿವಕುಮಾರ್ ರವರನ್ನು ಆಹ್ವಾನಿಸಲು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸನ್ಮಾನ್ಯ ಶಿವರಾಜ್ ಎಸ್ ತಂಗಡಗಿ ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಸನ್ಮಾನ್ಯ ರಾಮಲಿಂಗ ರೆಡ್ಡಿ ರವರನ್ನು ಹಾಗೂ ಕಾರ್ಮಿಕ ಸಚಿವರಾದ ಸನ್ಮಾನ್ಯ ಸಂತೋಷ್ ಲಾಡ್ ರವರನ್ನು ಸಮಾರಂಭದ ಮುಖ್ಯ ಅತಿಥಿಗಳಾಗಿ ಸನ್ಮಾನಿತರಾಗಿ ಆಹ್ವಾನಿಸಲು ತೀರ್ಮಾನಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*