ಬೆಂಗಳೂರು: ನಗರದ ಬಳೆಪೇಟೆಯಲ್ಲಿರುವ ಉಪಹಾರದರ್ಶಿನಿ ಹೋಟೆಲ್‌ನಲ್ಲಿ "ನಮ್ಮೆಲ್ಲರ ಕರ್ತವ್ಯ" ಕಿರುಚಿತ್ರದ ಪೂಜಾ ಸಮಾರಂಭ ಜರಗಿತು. ಸಮಾರಂಭದಲ್ಲಿ ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ. ಎಚ್.ಎಸ್ ನಟರಾಜ್ ಶೆಟ್ಟಿ ಹಾಗೂ ಚರ್ಮರೋಗ ತಜ್ಞ ಡಾ.ಶೀಲಾ ನಟರಾಜರವರು ನಮ್ಮೆಲ್ಲರ ಕರ್ತವ್ಯ ಕಿರುಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಇಂದು ಸಂಜೆ ಪತ್ರಿಕೆಯ ಸಂಪಾದಕರಾದ ವ್ಯವಸ್ಥಾಪಕ ಸಂಪಾದಕರದ ಡಾ.ಜಿ.ವೈ ಪದ್ಮನಾಗರಾಜುರವರು ಈ ಹಿಂದೆ ಮಾತಂಗಿ ದೀವಟಿಕೆ ಚಿತ್ರಕ್ಕೆ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ ಪ್ರಯುಕ್ತ ಈ ಚಿತ್ರ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿದೆ. ಪದ್ಮ ನಾಗರಾಜ್‌ರವರು ನಿರ್ದೇಶನದಲ್ಲಿ ನಮ್ಮೆಲ್ಲರ ಕರ್ತವ್ಯ ಕಿರು ಚಿತ್ರದ ಮೂಲಕ ಸಾಮಾಜಿಕ ಚಿಂತನೆಯುಳ್ಳ ನಾಡಿಗೆ ಉತ್ತಮ ಸಂದೇಶ ನೀಡುವ ಪ್ರಯತ್ನ ಅತ್ಯಂತ ಯಶಸ್ಸು ಕಾಣಲಿ ಎಂದು ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪುರಸ್ಕೃತರಾದ ಬಸವನಗುಡಿ ಡಾ.ತ್ಯಾಗರಾಜ್‌ರವರು ಪದ್ಮನಾಗರಾಜ್‌ರವರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಹ ನಿರ್ದೇಶಕಿ ಇಂದುಮತಿ, ಎಸ್ ಮುಕುಂದ. ಛಾಯಾಗ್ರಹಣ ಎ.ಟಿ ಕೃಷ್ಣ ಕೆ ಎಂ ದೊಡ್ಡಿ, ಸಂಗೀತ ನಿರ್ದೇಶಕ ಪ್ರಣವ್ ಸತೀಶ್, ಚಿತ್ರ ನಿರ್ಮಾಪಕರಾಗಿ ಜಿ.ಎಲ್ ಸಂಪಂಗಿರಾಮಲು, ತಾರಾಂಗಣದಲ್ಲಿ ಅಂಬಿಕಾ ವೆಂಕಟೇಶ್, ಆದಿತ್ ಸಾಗರ್ ಕಶ್ಯಪ್, ಚಂದ್ರಕಲಾ, ನಬಾ, ಹರ್ಷಿಕ, ವಾಣಿಶ್ರೀ, ಪೂರ್ಣಿಮಾ ಆಚಾರ್ಯ, ಶುಭ ವಿಶ್ವಕರ್ಮ,ಭಾಗ್ಯ, ಕಾಂಚನ, ಗುರು ನಂಜಪ್ಪ, ಅನ್ನಪೂರ್ಣಮ್ಮ, ಶಿವಾನಂದ ಹಿರೇಮಠ, ಬಳೇಪೇಟೆ ರಾಮಣ್ಣ, ಶುಭ ವಿಶ್ವಕರ್ಮ ಸೇರಿದಂತೆ ಅನೇಕರಿದ್ದರು.


