ಹಮಾಸ್ ನ ದಾಳಿ ತಡೆಯಲು ವಿಫಲ: ಇಸ್ರೇಲ್ ಸೇನೆಯ ಮುಖ್ಯಸ್ಥ ರಾಜೀನಾಮೆ

ಭಾಸ್ಕರ ಪತ್ರಿಕೆ
0











2023 ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯನ್ನು ತಡೆಯುವುದಕ್ಕೆ ವಿಫಲಗೊಂಡದ್ದಕ್ಕಾಗಿ ಇಸ್ರೇಲ್ ಸೇನೆಯ ಮುಖ್ಯಸ್ಥ ಹೆಲ್ಸಿ ಫಲೋವಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇವರ ಜೊತೆ ಸೇನೆಯ ದಕ್ಷಿಣ ಕಮಾಂಡ್ ಮುಖ್ಯಸ್ಥರಾಗಿದ್ದ ಯಾರೋನ್ ಫಿನ್ಕಲ್ ಕೂಡ ರಾಜೀನಾಮೆ ನೀಡಿದ್ದಾರೆ.

ಮಾರ್ಚ್ ಆರರಂದು ತಾನು ಸೇನಾ ಮುಖ್ಯಸ್ಥನ ಹುದ್ದೆಯನ್ನು ತೊರೆಯುವುದಾಗಿ ಹೇಲ್ಸಿ ಹೇಳಿದ್ದಾರೆ. ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಬಳಿಕ ಇಸ್ರೇಲ್ ಗಾಝಾದ ವಿರುದ್ಧ ಯುದ್ಧ ಘೋಷಿಸಿತ್ತು. ಹೀಗೆ 15 ತಿಂಗಳು ಕಾಲ ಯುದ್ಧ ನಡೆಸಿತು. ಇದೀಗ ಕದನ ವಿರಾಮ ಒಪ್ಪಂದ ಏರ್ಪಟ್ಟು ಮೂರು ದಿನಗಳಾಗಿವೆ. ಇದರ ನಡುವೆ ಹೆಲ್ಸಿ ಅವರ ರಾಜೀನಾಮೆಯ ಪ್ರಕಟಣೆ ಹೊರ ಬಿದ್ದಿದೆ.

ಇದೇ ವೇಳೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದ್ದರೂ ಪಶ್ಚಿಮ ಗಾಝಾದ ಜೆನಿನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದೆ. ಇದರಲ್ಲಿ 6 ಮಂದಿ ಸಾವಿಗೀಡಾಗಿ 35 ಮಂದಿ ಗಾಯಗೊಂಡಿದ್ದಾರೆ. ಅತಿಕ್ರಮಿತ ಪಶ್ಚಿಮ ದಂಡೆಯಲ್ಲಿ ಅಕ್ರಮ ನಿವಾಸಿಗಳು ಕೂಡ ವ್ಯಾಪಕ ಹಾನಿಯನ್ನು ಉಂಟುಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*