ಈಚನೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಜಲ ಅಭಿಯಾನ ಶಾಲಾ ಮಾಹಿತಿ ಮತ್ತು ಜಾಥ ಕಾರ್ಯಕ್ರಮ

ಭಾಸ್ಕರ ಪತ್ರಿಕೆ
0



ತಿಪಟೂರು: ಗ್ರಾಮಾಂತರ ತಾಲೂಕಿನ ಕರಡಿ ವಲಯದ ಈಚನೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಜಲ ಅಭಿಯಾನ ಶಾಲಾ ಮಾಹಿತಿ ಮತ್ತು ಜಾಥ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯೋಜನಾಧಿಕಾರಿ ಸುರೇಶ್  ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಗೂ ಸಂಘದ ಸದಸ್ಯರಿಗೆ ಶುದ್ಧ ನೀರಿನ ಬಗ್ಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ  ಸುಜ್ಞಾನ ನಿಧಿ ಮಾಹಿತಿ  ಶಿಷ್ಯವೇತನದ ಬಗ್ಗೆ ಮಾಹಿತಿ ನೀಡಿದರು. ತಿಪಟೂರು ಸರಕಾರಿ ಆಸ್ಪತ್ರೆಯ  ಆಪ್ತ ಸಮಾಲೋಚಕರಾದ ಶ್ರೀನಿವಾಸ್ ರವರು ಶುದ್ಧ ನೀರು ಹಾಗೂ ಬೋರ್ವೆಲ್ ನೀರಿಗೂ ಇರುವ ವ್ಯತ್ಯಾಸದ ಬಗ್ಗೆ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲತಾ, ಗ್ರಾಮ ಪಂಚಾಯತಿ ಅಧ್ಯಕ್ಷರು ಉದಯ್ ಗ್ರಾಮ ಪಂಚಾಯತಿ ಸದಸ್ಯರು ಗಿರೀಶ್, ಒಕ್ಕೂಟದ ಅಧ್ಯಕ್ಷರು ಸ್ವಾತಿ, ಶಾಲಾ ಮುಖ್ಯೋಪಾಧ್ಯಾಯರು ಸುಶೀಲರವರು ಶುದ್ಧಗಂಗಾ ಘಟಕದ ಮೇಲ್ವಿಚಾರಕರು ವಲಯದ ಮೇಲ್ವಿಚಾರಕರು ಸೇವಾ ಪ್ರತಿನಿಧಿ ಘಟಕದ ಪ್ರೇರಕರು ಶಾಲಾ ಮಕ್ಕಳು ಶಿಕ್ಷಕರು ಸಂಘದ ಸದಸ್ಯರು ಉಪಸ್ಥಿತರಿದ್ದರು.

ವರದಿ: ಧರಣೇಶ್‌ ಕುಪ್ಪಾಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*